Updated on: Feb 19, 2023 | 4:09 PM
ಮಹಿಳಾ ಟಿ20 ವಿಶ್ವಕಪ್ನ 14ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕುವ ಮೂಲಕ ಎಂಬುದೇ ಇಲ್ಲಿ ವಿಶೇಷ.
ಹೌದು, ಟೀಮ್ ಇಂಡಿಯಾ ಪರ ಅತ್ಯಧಿಕ ಟಿ20 ಪಂದ್ಯಗಳನ್ನು ಆಡಿದ ದಾಖಲೆ ಇದೀಗ ಹರ್ಮನ್ಪ್ರೀತ್ ಕೌರ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.
ರೋಹಿತ್ ಶರ್ಮಾ ಇದುವರೆಗೆ ಭಾರತದ ಪರ 148 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 4 ಶತಕ ಹಾಗೂ 29 ಅರ್ಧಶತಕಗೊಂದಿಗೆ ಒಟ್ಟು 3853 ರನ್ ಕಲೆಹಾಕಿದ್ದಾರೆ.
ಇದೀಗ ಟೀಮ್ ಇಂಡಿಯಾ ಪರ 149 ಟಿ20 ಪಂದ್ಯಗಳನ್ನಾಡಿರುವ ಹರ್ಮನ್ಪ್ರೀತ್ ಕೌರ್ ಹಿಟ್ಮ್ಯಾನ್ ಹೆಸರಿನಲ್ಲಿದ್ದ ಅತ್ಯಧಿಕ ಪಂದ್ಯಗಳಲ್ಲಿ ಕಾಣಿಸಿಕೊಂಡ ಭಾರತೀಯ ಎಂಬ ದಾಖಲೆಯನ್ನು ಮುರಿದಿದ್ದಾರೆ.
ಭಾರತದ ಪರ ಒಟ್ಟು 149 ಪಂದ್ಯಗಳಲ್ಲಿ 134 ಇನಿಂಗ್ಸ್ ಆಡಿರುವ ಹರ್ಮನ್ಪ್ರೀತ್ ಕೌರ್ 1 ಶತಕ ಹಾಗೂ 9 ಅರ್ಧಶತಕಗೊಂದಿಗೆ 2993 ರನ್ ಕಲೆಹಾಕಿದ್ದಾರೆ. ಈ ಮೂಲಕ ಅತ್ಯಧಿಕ ಟಿ20 ಪಂದ್ಯವಾಡಿದ ಟೀಮ್ ಇಂಡಿಯಾ ಪ್ಲೇಯರ್ ಎನಿಸಿಕೊಂಡಿದ್ದಾರೆ.