- TV9 Kannada Kannada News Photos Cricket Photos UAE vs AFG UAE beat Afghanistan in 2nd T20I Muhammad Waseem hit 91 runs in 50 balls
UAE vs AFG: ಕೇವಲ 15 ಎಸೆತಗಳಲ್ಲಿ 74 ರನ್ ಚಚ್ಚಿದ ವಾಸಿಂ! ಯುಎಇ ಎದುರು ಸೋತ ಅಫ್ಘಾನಿಸ್ತಾನ
UAE vs AFG: ತಮ್ಮ ಇನ್ನಿಂಗ್ಸ್ನಲ್ಲಿ 50 ಎಸೆತಗಳನ್ನು ಎದುರಿಸಿದ ಮುಹಮ್ಮದ್ ವಾಸಿಂ, 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 91 ರನ್ ಬಾರಿಸಿದರು.
Updated on: Feb 19, 2023 | 10:56 AM

ಯುಎಇ ಪ್ರವಾಸದಲ್ಲಿ ಅಫ್ಘಾನಿಸ್ತಾನ ತಂಡ ಪ್ರಸ್ತುತ 3 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲೆರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ, ಎರಡನೇ ಪಂದ್ಯದಲ್ಲಿ ಯುಎಇ 9 ವಿಕೆಟ್‌ಗಳ ಜಯ ಸಾಧಿಸಿದೆ.

ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಗಳಿಸಿತು. ನಜ್ಬುಲ್ಲಾ ಜದ್ರಾನ್ ಅಫ್ಘಾನಿಸ್ತಾನದ ಪರ ಗರಿಷ್ಠ 37 ರನ್ ಗಳಿಸಿದರು. ಮತ್ತೊಂದೆಡೆ ಯುಎಇ ಪರ ಜಹೂರ್ ಖಾನ್ 2 ವಿಕೆಟ್ ಪಡೆದರು. ಈ ಮೂಲಕ ಯುಎಇ ಎದುರು ಅಫ್ಘಾನಿಸ್ತಾನ 138 ರನ್‌ಗಳ ಗೆಲುವಿನ ಗುರಿ ನೀಡಿತು.

ಅಫ್ಘಾನಿಸ್ತಾನ ನೀಡಿದ 138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ 18.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ತಂಡದ ಪರ 50 ಎಸೆತಗಳಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ಮುಹಮ್ಮದ್ ವಾಸಿಂ ಯುಎಇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಮ್ಮ ಇನ್ನಿಂಗ್ಸ್ನಲ್ಲಿ 50 ಎಸೆತಗಳನ್ನು ಎದುರಿಸಿದ ಮುಹಮ್ಮದ್ ವಾಸಿಂ, 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 91 ರನ್ ಬಾರಿಸಿದರು.

ಅಂದರೆ, ಕೇವಲ 15 ಎಸೆತಗಳಲ್ಲಿ ಬೌಂಡರಿಗಳಿಂದಾಗಿ ವಾಸಿಂ 74 ರನ್ ಸಂಗ್ರಹಿಸಿದರು. ಇಡೀ ಇನಿಂಗ್ಸ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ವಾಸಿಂ 182ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು.

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More