IND vs BAN Head to Head Records: ಬಲಿಷ್ಠ ಭಾರತಕ್ಕೆ ಬಾಂಗ್ಲಾ ಎದುರಾಳಿ; ಉಭಯ ತಂಡಗಳ ಮುಖಾಮುಖಿ ವರದಿ
Women's World Cup 2022: ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಭಯ ತಂಡಗಳ ಹಿಂದಿನ ಮುಖಾಮುಖಿಯ ವರದಿಯನ್ನು ತಿಳಿದುಕೊಳ್ಳುವುದು ಮುಖ್ಯ.
ಐಸಿಸಿ ಮಹಿಳಾ ವಿಶ್ವಕಪ್ 2022 ರ 23 ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಈ ಪಂದ್ಯ ಹ್ಯಾಮಿಲ್ಟನ್ನಲ್ಲಿ ನಡೆಯಲಿದ್ದು, ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಭಯ ತಂಡಗಳ ಹಿಂದಿನ ಮುಖಾಮುಖಿಯ ವರದಿಯನ್ನು ತಿಳಿದುಕೊಳ್ಳುವುದು ಮುಖ್ಯ.
1 / 4
ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ನಾಲ್ಕು ಏಕದಿನ ಪಂದ್ಯಗಳ ವರದಿ ತೆಗೆದುಕೊಂಡರೆ. ಈ ಎಲ್ಲಾ ಪಂದ್ಯಗಳ ಫಲಿತಾಂಶ ಏಕಪಕ್ಷೀಯವಾಗಿದೆ. ಭಾರತ ಬಾಂಗ್ಲಾದೇಶವನ್ನು ಈ ನಾಲ್ಕೂ ಪಂದ್ಯಗಳಲ್ಲೂ ಮಣಿಸಿದೆ.
2 / 4
ಐಸಿಸಿ ಮಹಿಳಾ ವಿಶ್ವಕಪ್ನ ಪಿಚ್ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಅದೇ ಸಮಯದಲ್ಲಿ, ಈ ಇಬ್ಬರ ನಡುವಿನ ಕೊನೆಯ ODI ಪಂದ್ಯವು 2017 ರ ಆರಂಭದಲ್ಲಿ ನಡೆದಿತ್ತು. ಅಂದರೆ, 5 ವರ್ಷಗಳ ನಂತರ ಭಾರತ ಮತ್ತು ಬಾಂಗ್ಲಾದೇಶಗಳು ಪರಸ್ಪರ ಎದುರಾಗಲಿವೆ.
3 / 4
ಐಸಿಸಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶ ಇದುವರೆಗೆ ಕೇವಲ 4 ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ. ಇದರಲ್ಲಿ ಒಂದು ಪಂದ್ಯ ಗೆದ್ದು 3ರಲ್ಲಿ ಸೋತಿದೆ. ಅದೇ ಸಮಯದಲ್ಲಿ, ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಭಾರತ ಇದುವರೆಗೆ 68 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 36 ಪಂದ್ಯಗಳನ್ನು ಗೆದ್ದಿದೆ. ಅನುಭವದ ದೃಷ್ಟಿಯಿಂದ ನೋಡಿದರೆ ಭಾರತ,ಬಾಂಗ್ಲಾದೇಶಕ್ಕಿಂತ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಿದೆ. ಇದರ ಪರಿಣಾಮವನ್ನು ಪಂದ್ಯದ ಮೇಲೂ ಕಾಣಬಹುದು.