
ಐಸಿಸಿ ಮಹಿಳಾ ವಿಶ್ವಕಪ್ 2022 ರ 23 ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಈ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದ್ದು, ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಭಯ ತಂಡಗಳ ಹಿಂದಿನ ಮುಖಾಮುಖಿಯ ವರದಿಯನ್ನು ತಿಳಿದುಕೊಳ್ಳುವುದು ಮುಖ್ಯ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ನಾಲ್ಕು ಏಕದಿನ ಪಂದ್ಯಗಳ ವರದಿ ತೆಗೆದುಕೊಂಡರೆ. ಈ ಎಲ್ಲಾ ಪಂದ್ಯಗಳ ಫಲಿತಾಂಶ ಏಕಪಕ್ಷೀಯವಾಗಿದೆ. ಭಾರತ ಬಾಂಗ್ಲಾದೇಶವನ್ನು ಈ ನಾಲ್ಕೂ ಪಂದ್ಯಗಳಲ್ಲೂ ಮಣಿಸಿದೆ.

