Updated on: Dec 08, 2022 | 12:10 PM
ಪ್ರಸ್ತುತ ಬಾಂಗ್ಲಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿದೆ. ಈ ಸರಣಿ ಸೋಲಿಗೆ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ತಂಡದ ಪರ ಸತತ ಅದ್ಭುತ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಎರಡನೇ ಏಕದಿನ ಪಂದ್ಯದಲ್ಲಿ ದಾಖಲೆಯೊಂದನ್ನು ಮುರಿದಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದ ಶ್ರೇಯಸ್ ಅಯ್ಯರ್ ಭಾರತ ಪರ ಅತಿವೇಗವಾಗಿ 1500 ಏಕದಿನ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಅಯ್ಯರ್‌ಗಿಂತ ಮೊದಲು ಈ ದಾಖಲೆಯು 36 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. ಅಂದರೆ ಅಯ್ಯರ್, ರಾಹುಲ್ಗಿಂತ 2 ಇನ್ನಿಂಗ್ಸ್ ಕಡಿಮೆ ಆಡಿ 1500 ಏಕದಿನ ರನ್‌ಗಳನ್ನು ಪೂರೈಸಿದ್ದಾರೆ.
ಶ್ರೇಯಸ್ ಹಾಗೂ ರಾಹುಲ್ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಇದ್ದು, ಈ ಇಬ್ಬರು ಆಟಗಾರರು ತಲಾ 38 ಇನ್ನಿಂಗ್ಸ್‌ಗಳಲ್ಲಿ 1500 ಏಕದಿನ ರನ್‌ಗಳನ್ನು ಪೂರೈಸಿದ್ದರು. ಆದಾಗ್ಯೂ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಬಾಂಗ್ಲಾದೇಶ ವಿರುದ್ಧ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಈ ಪಂದ್ಯದಲ್ಲಿ ಟೀಂ 102 ಎಸೆತಗಳನ್ನು ಎದುರಿಸಿದ ಶ್ರೇಯಸ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 82 ರನ್ ಗಳಿಸಿದರು. ಆದರೆ ಈ ಇನ್ನಿಂಗ್ಸ್ನ ನಡುವೆಯೂ ಭಾರತಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.