IND vs ENG: ರಾಜ್‌ಕೋಟ್‌ನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಜಡೇಜಾ..!
Ravindra Jadeja: ತವರು ನೆಲದಲ್ಲಿ ತಮ್ಮ ವೃತ್ತಿಜೀವನದ ನಾಲ್ಕನೇ ಟೆಸ್ಟ್ ಶತಕವನ್ನು ಬಾರಿಸುವಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಯಶಸ್ವಿಯಾಗಿದ್ದಾರೆ. ಅಲ್ಲದೆ ರಾಜ್‌ಕೋಟ್‌ನಲ್ಲಿ ಜಡೇಜಾಗೆ ಇದು ಮೊದಲ ಶತಕ ಕೂಡ ಆಗಿದೆ. ಇದಲ್ಲದೆ ಜಡೇಜಾ ಹಲವು ದಾಖಲೆಗಳನ್ನು ಮುರಿದಿದ್ದಾರೆ.
1 / 6
ತವರು ನೆಲದಲ್ಲಿ ತಮ್ಮ ವೃತ್ತಿಜೀವನದ ನಾಲ್ಕನೇ ಟೆಸ್ಟ್ ಶತಕವನ್ನು ಬಾರಿಸುವಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಯಶಸ್ವಿಯಾಗಿದ್ದಾರೆ. ಅಲ್ಲದೆ ರಾಜ್‌ಕೋಟ್‌ನಲ್ಲಿ ಜಡೇಜಾಗೆ ಇದು ಮೊದಲ ಶತಕ ಕೂಡ ಆಗಿದೆ. ಇದಲ್ಲದೆ ಜಡೇಜಾ ಹಲವು ದಾಖಲೆಗಳನ್ನು ಮುರಿದಿದ್ದಾರೆ.
2 / 6
ವಿಶ್ವದ ನಂಬರ್ ಒನ್ ಟೆಸ್ಟ್ ಆಲ್‌ರೌಂಡರ್ ಆಗಿರುವ ಜಡೇಜಾ, ಇಂಗ್ಲೆಂಡ್ ವಿರುದ್ಧ ತನ್ನ ಎರಡನೇ ಟೆಸ್ಟ್ ಶತಕ ದಾಖಲಿಸಿದರೆ, ತನ್ನ 10 ವರ್ಷಗಳ ವೃತ್ತಿಜೀವನದಲ್ಲಿ ತವರಿನಲ್ಲಿ ಎರಡನೇ ಶತಕ ಸಿಡಿಸಿದ ದಾಖಲೆ ಬರೆದರು. ನಾಲ್ಕನೇ ಟೆಸ್ಟ್ ಶತಕಕ್ಕಾಗಿ 198 ಎಸೆತಗಳನ್ನು ಎದುರಿಸಿದ ಜಡೇಜಾ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
3 / 6
ಈ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ರವೀಂದ್ರ ಜಡೇಜಾ ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಪೂರೈಸಿದ್ದಾರೆ. ಈ ಟೆಸ್ಟ್‌ಗೂ ಮುನ್ನ ಅವರು 69 ಟೆಸ್ಟ್‌ಗಳಲ್ಲಿ 2893 ರನ್ ಗಳಿಸಿದ್ದರು. ಅಂದರೆ 3000 ರನ್‌ಗಳನ್ನು ಪೂರೈಸಲು ಅವರಿಗೆ 107 ರನ್‌ಗಳ ಅಗತ್ಯವಿತ್ತು. ಈ ಮೈಲಿಗಲ್ಲನ್ನು ಜಡೇಜಾ ದಿನದಾಟದಂತ್ಯಕ್ಕೂ ಮೊದಲು ಪೂರ್ಣಗೊಳಿಸಿದರು.
4 / 6
ಪ್ರಸ್ತುತ ಟೆಸ್ಟ್‌ನಲ್ಲಿ 3003 ರನ್ ಪೂರೈಸಿರುವ ಜಡೇಜಾ ಬೌಲಿಂಗ್ನಲ್ಲೂ ಮ್ಯಾಜಿಕ್ ಮಾಡಿದ್ದು, 200 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ 3000 ರನ್ ಮತ್ತು 200 ವಿಕೆಟ್‌ಗಳನ್ನು ಪಡೆದ ಭಾರತದ ಕೆಲವೇ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
5 / 6
ಜಡೇಜಾಗೂ ಮೊದಲು ಈ ಸಾಧನೆ ಕಪಿಲ್ ದೇವ್ ಹೆಸರಿನಲ್ಲಿತ್ತು. ವಿಶ್ವಕಪ್ ಹೀರೋ ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್‌ನಲ್ಲಿ 5248 ರನ್ ಮತ್ತು 434 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ದೀರ್ಘಕಾಲದವರೆಗೆ ಈ ದಾಖಲೆ ಅವರ ಹೆಸರಿನಲ್ಲಿದೆ.
6 / 6
ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿರುವ ರವಿ ಅಶ್ವಿನ್ ಟೆಸ್ಟ್‌ನಲ್ಲಿ ಇದುವರೆಗೆ 3271 ರನ್ ಮತ್ತು 499 ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿದ್ದಾರೆ. ಇನ್ನು ರವೀಂದ್ರ ಜಡೇಜಾ 3003 ರನ್ ಹಾಗೂ 280 ವಿಕೆಟ್ ಪಡೆದಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.