AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಶತಕದ ಸಮೀಪದಲ್ಲಿ ರನೌಟ್​ಗೆ ಬಲಿಯಾಗಿ ಬೇಡದ ದಾಖಲೆ ಬರೆದ ಗಿಲ್..!

Shubman Gill: ಕೇವಲ 9 ರನ್​ಗಳಿಂದ ಶತಕ ವಂಚಿತರಾದ ಗಿಲ್, ಬೇಡದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಶತಕದ ಸಮೀಪದಲ್ಲಿ ರನೌಟ್​ಗೆ ಬಲಿಯಾದ ಭಾರತದ 6ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Feb 18, 2024 | 4:08 PM

Share
ರಾಜ್‌ಕೋಟ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿ ಟೀಕಾಕಾರರ ಬಾಯಿಗೆ ಮತ್ತೊಮ್ಮೆ ಆಹಾರವಾಗಿದ್ದ ಶುಭ್​ಮನ್ ಗಿಲ್, ಎರಡನೇ ಇನ್ನಿಂಗ್ಸ್​ನಲ್ಲಿ 91 ರನ್​ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಪ್ರಶ್ನೆಗೂ ಉತ್ತರ ನೀಡಿದರು.

1 / 6
ಆದರೆ ಕೇವಲ 9 ರನ್​ಗಳಿಂದ ಶತಕ ವಂಚಿತರಾದ ಗಿಲ್, ಬೇಡದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಶತಕದ ಸಮೀಪದಲ್ಲಿ ರನೌಟ್​ಗೆ ಬಲಿಯಾದ ಭಾರತದ 6ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

2 / 6
ವಾಸ್ತವವಾಗಿ ಇಂಗ್ಲೆಂಡ್‌ ವಿರುದ್ಧ ಎರಡನೇ ಇನ್ನಿಂಗ್ಸ್​ನಲ್ಲಿ ದಿಟ್ಟ ಪ್ರದರ್ಶನ ನೀಡಿದ ಗಿಲ್ 151 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 91 ರನ್ ಕಲೆಹಾಕಿದರು. ಆದರೆ ಈ ವೇಳೆ ಕುಲ್ದೀಪ್ ಯಾದವ್ ಜೊತೆಗಿನ ಸಮನ್ವಯದ ಕೊರತೆಯಿಂದಾಗಿ ರನೌಟ್​ಗೆ ಬಲಿಯಾಗಬೇಕಾಯಿತು.

3 / 6
ಶತಕದಂಚಿನಲ್ಲಿ ಎಡವಿದಕ್ಕೆ ಸ್ವತಂ ಶುಭಮಾನ್ ಗಿಲ್ ಕೂಡ ಕೋಪಗೊಂಡಿದ್ದರು. ವಾಸ್ತವವಾಗಿ ಗಿಲ್ ನರ್ವಸ್ ನೈಂಟಿಗೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗಬ್ಬಾ ಟೆಸ್ಟ್‌ನಲ್ಲಿ 91 ರನ್‌ಗಳಿಗೆ ಔಟಾಗಿದ್ದರು.

4 / 6
ಇದೀಗ ಮತ್ತೊಮ್ಮೆ ಶತಕ ವಂಚಿತರಾದ ಗಿಲ್, ಟೆಸ್ಟ್‌ನಲ್ಲಿ ನರ್ವಸ್ ನೈಂಟಿಯಲ್ಲಿ ರನ್ ಔಟ್ ಆದ ಆರನೇ ಭಾರತೀಯ ಎನಿಸಿಕೊಂಡಿದ್ದಾರೆ. ಹಾಗೆಯೇ 2012 ರ ನಂತರ ಭಾರತೀಯ ಬ್ಯಾಟ್ಸ್‌ಮನ್ ನರ್ವಸ್ ನೈಂಟಿಯಲ್ಲಿ ರನೌಟ್ ಆಗಿದ್ದು ಇದೇ ಮೊದಲು. ಇದಕ್ಕೂ ಮೊದಲು 2012ರಲ್ಲಿ ಎಂಎಸ್ ಧೋನಿ ನರ್ವಸ್ ನೈಂಟಿಯಲ್ಲಿ ರನ್ ಔಟ್ ಆಗಿದ್ದರು.

5 / 6
ಇಂಗ್ಲೆಂಡ್ ವಿರುದ್ಧ ನಡೆದ ಆ ಪಂದ್ಯದಲ್ಲಿ ಎಂಎಸ್ ಧೋನಿ 99 ರನ್ ಕಲೆಹಾಕಿದ್ದಾಗ ರನೌಟ್​ಗೆ ಬಲಿಯಾಗಿ ಕೇವಲ 1 ರನ್​ಗಳಿಂದ ಶತಕ ವಂಚಿತರಾಗಿದ್ದರು. ಗಿಲ್ ಮತ್ತು ಧೋನಿ ಹೊರತಾಗಿ ಮೋಟಗನಹಳ್ಳಿ ಜಯಸಿಂಹ, ವಿನೂ ಮಂಕಡ್, ಅಜಯ್ ಜಡೇಜಾ ಮತ್ತು ದಿಲೀಪ್ ವೆಂಗ್‌ಸರ್ಕರ್ ಕೂಡ ನರ್ವಸ್ ನೈಂಟಿಯಲ್ಲಿ ರನೌಟ್ ಆಗಿದ್ದಾರೆ.

6 / 6