IND vs ENG: ಅಪರೂಪದ ದಾಖಲೆ ಬರೆಯಲು ರವೀಂದ್ರ ಜಡೇಜಾಗೆ ಇನ್ನೇರಡೇ ವಿಕೆಟ್ ಬೇಕು..!
IND vs ENG: ಈ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ರವೀಂದ್ರ ಜಡೇಜಾಗೆ ಈ ಟೆಸ್ಟ್ ಸರಣಿ ತುಂಬಾ ವಿಶೇಷವಾಗಿದೆ. ಈ ಸರಣಿಯಲ್ಲಿ ಜಡೇಜಾ ಕೇವಲ 2 ವಿಕೆಟ್ ಪಡೆದರೆ, 6 ಭಾರತೀಯ ಆಟಗಾರರು ನಿರ್ಮಿಸಿರುವ ವಿಶೇಷ ಸಾಧನೆಯ ಪಟ್ಟಿಗೆ ತಾವು ಕೂಡ ಸೇರ್ಪಡೆಗೊಳ್ಳಲಿದ್ದಾರೆ.
1 / 7
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜನವರಿ 25 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಕೂಡ ಇಂದಿನಿಂದ ಈ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದೆ.
2 / 7
ಇನ್ನು ಈ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ರವೀಂದ್ರ ಜಡೇಜಾಗೆ ಈ ಟೆಸ್ಟ್ ಸರಣಿ ತುಂಬಾ ವಿಶೇಷವಾಗಿದೆ. ಈ ಸರಣಿಯಲ್ಲಿ ಜಡೇಜಾ ಕೇವಲ 2 ವಿಕೆಟ್ ಪಡೆದರೆ, 6 ಭಾರತೀಯ ಆಟಗಾರರು ನಿರ್ಮಿಸಿರುವ ವಿಶೇಷ ಸಾಧನೆಯ ಪಟ್ಟಿಗೆ ತಾವು ಕೂಡ ಸೇರ್ಪಡೆಗೊಳ್ಳಲಿದ್ದಾರೆ.
3 / 7
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಟೆಸ್ಟ್‌ನಲ್ಲಿ ಜಡೇಜಾ ಎರಡು ವಿಕೆಟ್ ಪಡೆದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 550 ವಿಕೆಟ್ ಪೂರೈಸಲಿದ್ದಾರೆ.
4 / 7
ಈ ಮೂಲಕ ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಅನಿಲ್ ಕುಂಬ್ಳೆ, ಕಪಿಲ್ ದೇವ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆರ್ ಅಶ್ವಿನ್ ಮತ್ತು ಜವಲ್ನಾಥ್ ಶ್ರೀನಾಥ್ ಮಾತ್ರ ಈ ಸಾಧನೆ ಮಾಡಿದ ಭಾರತದ ಬೌಲರ್ಗಳಾಗಿದ್ದಾರೆ.
5 / 7
ರವೀಂದ್ರ ಜಡೇಜಾ ಭಾರತ ಪರ ಇದುವರೆಗೆ 68 ಟೆಸ್ಟ್, 197 ಏಕದಿನ ಮತ್ತು 66 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜಡೇಜಾ ಇದುವರೆಗೆ ಟೆಸ್ಟ್‌ನಲ್ಲಿ 275, ಏಕದಿನದಲ್ಲಿ 220 ಮತ್ತು ಟಿ20ಯಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ.
6 / 7
ಇನ್ನು ಇಂಗ್ಲೆಂಡ್ ವಿರುದ್ಧ 16 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ 51 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ಇದುವರೆಗೆ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಮಾತ್ರ ತಂಡವನ್ನು ಪ್ರಕಟಿಸಿದ್ದು, ಈ ಎರಡೂ ಪಂದ್ಯಗಳಿಗೆ ರವೀಂದ್ರ ಜಡೇಜಾ ತಂಡದ ಭಾಗವಾಗಿದ್ದಾರೆ.
7 / 7
ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಮುಕೇಶ್ ಕುಮಾರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅವೇಶ್ ಖಾನ್.