ವೇಗ ಅತೀ ವೇಗ… ಭರ್ಜರಿ ದಾಖಲೆ ಬರೆದ ಭಾರತ ತಂಡ

|

Updated on: Jan 23, 2025 | 7:23 AM

IND vs ENG 1st T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಯ ತಂಡ 132 ರನ್ ಗಳಿಸಿ ಆಲೌಟ್ ಆದರೆ, ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 12.5 ಚೇಸ್ ಮಾಡಿದೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದೆ.

1 / 6
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

2 / 6
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್​ಗಳು ಇಂಗ್ಲೆಂಡ್​ನ ಎಲ್ಲಾ ಬ್ಯಾಟರ್​ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದಾಗ್ಯೂ ಒಂದೆಡೆ ನಾಯಕ ಜೋಸ್ ಬಟ್ಲರ್ 44 ಎಸೆತಗಳಲ್ಲಿ 68 ರನ್ ಬಾರಿಸುವಲ್ಲಿ ಸಫಲರಾದರು. ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 20 ಓವರುಗಳಲ್ಲಿ 132 ರನ್ ಗಳಿಸಿ ಆಲೌಟ್ ಆಯಿತು.

3 / 6
133 ರನ್ ಗಳ ಗುರಿ ಪಡೆದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದರು. ಅದರಲ್ಲೂ ಅಭಿಷೇಕ್ ಶರ್ಮಾ ಕೇವಲ 34 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 5 ಫೋರ್ ಗಳೊಂದಿಗೆ 79 ರನ್ ಚಚ್ಚಿದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಕೇವಲ 12.5 ಓವರ್‌ಗಳಲ್ಲಿ 133 ರನ್ ಬಾರಿಸಿ 7 ವಿಕೆಟ್‌ಗಳ ಜಯ ಸಾಧಿಸಿತು.

4 / 6
ಈ ಜಯದೊಂದಿಗೆ ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಗೆಲುವಿನ ದಾಖಲೆ ಬರೆದಿದೆ. ಅಂದರೆ ಟಿ20 ಪಂದ್ಯದಲ್ಲಿ ಭಾರತ ತಂಡವು ಇದೇ ಮೊದಲ ಬಾರಿಗೆ 130+ ರನ್ ಗಳ ಗುರಿಯನ್ನು ಅತೀ ವೇಗವಾಗಿ ಚೇಸ್ ಮಾಡಿ ಜಯಭೇರಿ ಬಾರಿಸಿದೆ.

5 / 6
ಇದಕ್ಕೂ ಮುನ್ನ ಭಾರತ ತಂಡ 130+ ಸ್ಕೋರ್ ಅನ್ನು ಅತೀ ವೇಗವಾಗಿ ಚೇಸ್ ಮಾಡಿದ್ದು 2012 ರಲ್ಲಿ. ಪುಣೆಯಲ್ಲಿ ನಡೆದ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 158 ರನ್ ಗಳನ್ನು 17.5 ಓವರುಗಳಲ್ಲಿ ಚೇಸ್ ಮಾಡಿ ದಾಖಲೆ ಬರೆದಿತ್ತು.

6 / 6
ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ 43 ಎಸೆತಗಳನ್ನು ಬಾಕಿ ಇರಿಸಿ ಟೀಮ್ ಇಂಡಿಯಾ 133 ರನ್ ಗಳನ್ನು ಬೆನ್ನಟ್ಟಿ ಗೆದ್ದಿದೆ. ಈ ಮೂಲಕ ಅತ್ಯಧಿಕ ಎಸೆತಗಳನ್ನು ಬಾರಿಸಿ 130+ ರನ್ ಗಳನ್ನು ಚೇಸ್ ಮಾಡಿದ ವಿಶೇಷ ದಾಖಲೆಯೊಂದನ್ನು ಟೀಮ್ ಇಂಡಿಯಾ ಬರೆದಿದೆ.