AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಚ್ ಕೈ ಚೆಲ್ಲಿಯೇ ಕಳಪೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

India vs England: ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟರ್​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್​ಗಳಿಸಿದೆ.

ಝಾಹಿರ್ ಯೂಸುಫ್
|

Updated on: Jun 23, 2025 | 12:00 PM

Share
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 471 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಬೇಕಿತ್ತು.

1 / 5
ಆದರೆ ಟೀಮ್ ಇಂಡಿಯಾ ಫೀಲ್ಡರ್​ಗಳು ಮಾಡಿದ ತಪ್ಪುಗಳೇ ಭಾರತ ತಂಡದ ಪಾಲಿಗೆ ದುಬಾರಿಯಾಯಿತು. ಏಕೆಂದರೆ ಈ ಮ್ಯಾಚ್​ನಲ್ಲಿ ಭಾರತೀಯ ಫೀಲ್ಡರ್​ಗಳು ಚೆಲ್ಲಿರುವುದು ಬರೋಬ್ಬರಿ 5 ಕ್ಯಾಚ್​ಗಳನ್ನು ಎಂದರೆ ನಂಬಲೇಬೇಕು. ಇದು ಕಳೆದ ಐದು ವರ್ಷಗಳಲ್ಲಿ ಟೀಮ್ ಇಂಡಿಯಾದ ಇನಿಂಗ್ಸ್​ವೊಂದರಲ್ಲಿ ಕಂಡು ಬಂದ ಅತ್ಯಧಿಕ ಕ್ಯಾಚ್ ಡ್ರಾಪ್.

2 / 5
ಈ ಐದು ಕ್ಯಾಚ್​ಗಳಲ್ಲಿ ಮೂರು ಕ್ಯಾಚ್​ಗಳನ್ನು ಕೈ ಬಿಟ್ಟಿರುವುದು ಯುವ ಆಟಗಾರ ಯಶಸ್ವಿ ಜೈಸ್ವಾಲ್. ಮೊದಲ ದಿನದಾಟದ ಆರಂಭದಲ್ಲೇ ಬೆನ್ ಡಕೆಟ್ ಕ್ಯಾಚ್ ಕೈ ಬಿಟ್ಟಿದ್ದ ಜೈಸ್ವಾಲ್, ಆ ಬಳಿಕ ಒಲೀ ಪೋಪ್ ನೀಡಿದ ಕ್ಯಾಚ್​ ಹಿಡಿಯುವಲ್ಲಿ ವಿಫಲರಾದರು. ಇದಾದ ಬಳಿಕ ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಹ್ಯಾರಿ ಬ್ರೂಕ್ ನೀಡಿದ ಸುಲಭ ಕ್ಯಾಚ್ ಅನ್ನು ಸ್ಲಿಪ್​ನಲ್ಲಿದ್ದ ಯಶಸ್ವಿ ಜೈಸ್ವಾಲ್ ಕೈ ಬಿಟ್ಟರು.

3 / 5
ಹೀಗೆ ಒಂದೇ ಇನಿಂಗ್ಸ್​ನಲ್ಲಿ ಮೂರು ಕ್ಯಾಚ್​ಗಳನ್ನು ಕೈಚೆಲ್ಲುವ ಮೂಲಕ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರ ಟೆಸ್ಟ್​ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಕ್ಯಾಚ್ ಬಿಟ್ಟ ಫೀಲ್ಡರ್ ಎಂಬ ಕಳಪೆ ದಾಖಲೆ ಬರೆದಿದ್ದಾರೆ. ಈ ಮೂಲಕ 23 ವರ್ಷದ ಯಶಸ್ವಿ ಭಾರತದ ಪರ ಟೆಸ್ಟ್ ಇನಿಂಗ್ಸ್​ನಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

4 / 5
ಇನ್ನು ಟೀಮ್ ಇಂಡಿಯಾ ಆಟಗಾರರು ನೀಡಿದ ಜೀವದಾನದ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ದಾಂಡಿಗರಾದ ಬೆನ್ ಡಕೆಟ್ 62 ರನ್ ಗಳಿಸಿದರೆ, ಒಲೀ ಪೋಪ್ 106 ರನ್​ಗಳ ಶತಕ ಸಿಡಿಸಿದರು. ಇನ್ನು ಹ್ಯಾರಿ ಬ್ರೂಕ್ 99 ರನ್​ಗಳ ಇನಿಂಗ್ಸ್ ಆಡಿದರು. ಈ ಮೂಲಕ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 465 ರನ್​ಗಳಿಸುವಲ್ಲಿ ಯಶಸ್ವಿಯಾಗಿದೆ.

5 / 5