IND vs IRE: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ರಿಂಕು ಸಿಂಗ್ ಆಯ್ಕೆ ಖಚಿತ..!

|

Updated on: Jul 07, 2023 | 1:27 PM

IND vs IRE: ಮಂಡಳಿಯ ಮೂಲಗಳ ಪ್ರಕಾರ, ರಿಂಕುಗೆ ಕೆರಿಬಿಯನ್ ಪ್ರವಾಸಕ್ಕೆ ಟಿಕೆಟ್ ಸಿಗದಿದ್ದರೂ, ಮುಂದಿನ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗಿದೆ.

1 / 6
ಐಪಿಎಲ್‌ನಲ್ಲಿ ಗಮನ ಸೆಳೆದ ಕ್ರಿಕೆಟಿಗರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಆದರೆ ಗೇಮ್ ಫಿನಿಶರ್ ಖ್ಯಾತಿಯ ರಿಂಕು ಸಿಂಗ್ ಅವರನ್ನು ನಿರ್ಲಕ್ಷಿಸಲಾಗಿದೆ. ಕೆರಿಬಿಯನ್ ಸರಣಿಗೆ ರಿಂಕು ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

2 / 6
ಆದಾಗ್ಯೂ, ಮಂಡಳಿಯ ಮೂಲಗಳ ಪ್ರಕಾರ, ರಿಂಕುಗೆ ಕೆರಿಬಿಯನ್ ಪ್ರವಾಸಕ್ಕೆ ಟಿಕೆಟ್ ಸಿಗದಿದ್ದರೂ, ಮುಂದಿನ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗಿದೆ.

3 / 6
ವೆಸ್ಟ್ ಇಂಡೀಸ್ ಪ್ರವಾಸದ ನಂತರ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿಯನ್ನು ಆಡಲು ಮೆನ್ ಇನ್ ಬ್ಲೂ ಐರ್ಲೆಂಡ್‌ಗೆ ಹೋಗಲಿದೆ. ಈ ಪ್ರವಾಸದಲ್ಲಿ ಏಕದಿನ ತಂಡದಲ್ಲಿರುವ 7 ಕ್ರಿಕೆಟಿಗರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವುದಿಲ್ಲ . ಇದರಿಂದ ಯುವಕರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯಲಿದೆ.

4 / 6
ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಈ ಸರಣಿಗೆ ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

5 / 6
ಅಲ್ಲದೆ ಏಷ್ಯನ್ ಗೇಮ್ಸ್‌ಗೆ ಕ್ರಿಕೆಟ್ ತಂಡವನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದ್ದು, ಏಕದಿನ ವಿಶ್ವಕಪ್‌ಗೂ ಮುನ್ನ ನಡೆಯಲ್ಲಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತ ‘ಬಿ’ ತಂಡವನ್ನು ಕಳುಹಿಸಲು ನಿರ್ಧರಿಸಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ರಿಂಕು ಅವರಂತಹ ಕೆಲವು ಯುವ ಕ್ರಿಕೆಟಿಗರನ್ನು ಐರ್ಲೆಂಡ್ ಸರಣಿಯಲ್ಲಿ ಆಡಿಸಲು ಮಂಡಳಿ ಮುಂದಾಗಿದೆ.

6 / 6
ಇದಕ್ಕೆ ಪೂರಕವಾಗಿ ಉದಯೋನ್ಮುಖ ಏಷ್ಯಾಕಪ್​ಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದ್ದು, ಈ ಟೂರ್ನಿಗೆ ಐಪಿಎಲ್‌ನ ಹಲವು ಆಟಗಾರರು ತಂಡದಲ್ಲಿ ಆಯ್ಕೆಯಾಗಿದ್ದಾರೆ. ಈ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಆಟಗಾರರನ್ನು ಹಿರಿಯರ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.