IND vs NZ 2nd ODI: ಭಾರತೀಯ ಬೌಲರ್​ಗಳ ಬಿರುಗಾಳಿ, ನ್ಯೂಜಿಲೆಂಡ್ ಧೂಳಿಪಟ: ದ್ವಿತೀಯ ಏಕದಿನದ ರೋಚಕ ಫೋಟೋ ನೋಡಿ

Edited By:

Updated on: Jan 22, 2023 | 7:46 AM

India vs New Zealand 2nd ODI: ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಬಿರುಗಾಳಿ ಎಬ್ಬಿಸಿದರು. ಕಿವೀಸ್ ಬ್ಯಾಟರ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಲಿಯನ್​ಗೆ ಅಟ್ಟಿದ ಟೀಮ್ ಇಂಡಿಯಾ ಬೌಲರ್ಸ್ ಸರಣಿ ವಶಪಡಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಹಿಸಿದರು.

1 / 8
ಹೈದರಾಬಾದ್​ನಲ್ಲಿ ನಡೆದಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ರೋಚಕ ಕಾದಾಟದಲ್ಲಿ ಟೀಮ್ ಇಂಡಿಯಾ 12 ರನ್​ಗಳ ಜಯ ಸಾಧಿಸಿತು. ಹೀಗಾಗಿ ದ್ವಿತೀಯ ಏಕದಿನ ಕೂಡ ಹೈಸ್ಕೋರ್ ಪಂದ್ಯ ಆಗಬಹುದು ಎಂದೇ ನಂಬಲಾಗಿತ್ತು. ಆದರೆ, ರಾಯ್​ಪುರದಲ್ಲಿ ನಡೆದಿದ್ದೇ ಬೇರೆ.

ಹೈದರಾಬಾದ್​ನಲ್ಲಿ ನಡೆದಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ರೋಚಕ ಕಾದಾಟದಲ್ಲಿ ಟೀಮ್ ಇಂಡಿಯಾ 12 ರನ್​ಗಳ ಜಯ ಸಾಧಿಸಿತು. ಹೀಗಾಗಿ ದ್ವಿತೀಯ ಏಕದಿನ ಕೂಡ ಹೈಸ್ಕೋರ್ ಪಂದ್ಯ ಆಗಬಹುದು ಎಂದೇ ನಂಬಲಾಗಿತ್ತು. ಆದರೆ, ರಾಯ್​ಪುರದಲ್ಲಿ ನಡೆದಿದ್ದೇ ಬೇರೆ.

2 / 8

ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಬಿರುಗಾಳಿ ಎಬ್ಬಿಸಿದರು. ಕಿವೀಸ್ ಬ್ಯಾಟರ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಲಿಯನ್​ಗೆ ಅಟ್ಟಿದ ಟೀಮ್ ಇಂಡಿಯಾ ಬೌಲರ್ಸ್ ಸರಣಿ ವಶಪಡಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಹಿಸಿದರು.

3 / 8

34.2 ಓವರ್‌ಗಳಲ್ಲಿ ಕೇವಲ 108 ರನ್‌ಗಳನ್ನು ನೀಡಿ ಸರ್ವಪತನ ಕಂಡ ಕಿವೀಸ್ ತಂಡ ಹೀನಾಯ ಪ್ರದರ್ಶನ ತೋರಿತು. ಮೊಹಮ್ಮದ್ ಶಮಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡು, ತಮ್ಮ 6 ಓವರ್​ಗಳಲ್ಲಿ ಕೇವಲ 18 ರನ್​ ನೀಡಿ ಮೂರು ವಿಕೆಟ್ ಪಡೆದರು.

4 / 8

ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

5 / 8

ಭಾರತದ ವೇಗಿಗಳ ದಾಳಿಗೆ ನ್ಯೂಜಿಲೆಂಡ್ ಆಟಗಾರರು​ ರನ್​ ಗಳಿಸಲು ಹರಸಾಹಸಪಡಬೇಕಾಯಿತು. ಸ್ಟಾರ್ ಬ್ಯಾಟರ್ ಎನಿಸಿಕೊಂಡವರಾರು ಎರಡಂಕಿ ಮೀರಲಿಲ್ಲ. ಗ್ಲೆನ್ ಫಿಲಿಪ್ಸ್ 36 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು.

6 / 8

ಭಾರತ ತಂಡ ಕೇವಲ 20.1 ಓವರ್​ಗಳಿಗೆ 2 ವಿಕೆಟ್ ಕಳೆದುಕೊಂಡು 111 ರನ್​ಗಳಿಸುವ ಮೂಲಕ 8 ವಿಕೆಟ್​ಗಳ ಜಯ ದಾಖಲಿಸಿತು. ರೋಹಿತ್ ಶರ್ಮಾ 50 ಎಸೆತದಲ್ಲಿ 7 ಬೌಂಡರಿ ಮತ್ತು​ 2 ಸಿಕ್ಸ್ ಒಳಗೊಂಡಂತೆ 51 ರನ್ ಗಳಿಸಿ ಗೆಲವಿನ ಹಾದಿಯನ್ನು ಸುಗಮಗೊಳಿಸಿದರು.

7 / 8

ವಿರಾಟ್ ಕೊಹ್ಲಿ 11 ರನ್​ಗೆ ಔಟಾದರೆ ಯುವ ಆಟಗಾರ ಶುಭ್​ಮನ್ ಗಿಲ್​ ಔಟ್​ ಆಗದೇ 40 (53) ಮತ್ತು ಇಶಾನ್ ಕಿಶನ್ 8 (9) ರನ್​ ಗಳಿಸುವ ಮೂಲಕ ತಂಡದ ಗೆಲುವನ್ನು ಸಲೀಸಾಗಿ ಡದಕ್ಕೆ ಸೇರಿಸಿದರು. ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಬಾಚಿಕೊಂಡರು.

8 / 8

8 ವಿಕೆಟ್​ಗಳ ಅಮೋಘ ಜಯದೊಂದಿಗೆ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಇನ್ನು 1 ಪಂದ್ಯ ಬಾಕಿ ಇರುವಂತೆಯೇ ಜಯದ ಮಾಲೆಯನ್ನು ಧರಿಸಿದೆ. ಅಂತಿಮ ಏಕದಿನ ಜನವರಿ 24 ಮಂಗಳವಾರದಂದು ನಡೆಯಲಿದೆ.

Published On - 7:46 am, Sun, 22 January 23

Loading...
Unable to load recommendations.
Follow Us