IND vs NZ: ದ್ವಿಪಕ್ಷೀಯ ಸರಣಿಯಲ್ಲಿ ಅಶ್ವಿನ್ ಸಾಧನೆಗಿಲ್ಲ ಸರಿಸಾಟಿ! ರಿಚರ್ಡ್ ಹ್ಯಾಡ್ಲಿ ದಾಖಲೆ ಮುರಿದ ಸ್ಪಿನ್ ಮಾಂತ್ರಿಕ
TV9 Web | Updated By: ಪೃಥ್ವಿಶಂಕರ
Updated on:
Dec 06, 2021 | 11:19 AM
IND vs NZ: ಅಶ್ವಿನ್ ತಂಡದ ಗೆಲುವಿಗೆ ಹೆಚ್ಚು ಕೊಡುಗೆ ನೀಡಿದ ಟೆಸ್ಟ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತ ಗೆದ್ದ ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇವರ ಹೆಸರಲ್ಲಿ 296 ವಿಕೆಟ್‌ಗಳಿವೆ.
1 / 5
ಟೀಂ ಇಂಡಿಯಾ
2 / 5
ಎರಡನೇ ಟೆಸ್ಟ್‌ನಲ್ಲಿ ಭಾರತವನ್ನು ಗೆಲ್ಲುವಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲೂ ಆರ್ ಅಶ್ವಿನ್. ಈ ಪಂದ್ಯವು ತಂಡದ ಅತ್ಯಂತ ಅನುಭವಿ ಸ್ಪಿನ್ ಬೌಲರ್‌ಗೆ ವಿಶೇಷವಾಗಿತ್ತು, ಅಲ್ಲಿ ಅವರು ತಮ್ಮ ಹೆಸರಿನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದರು.
3 / 5
ಅಶ್ವಿನ್ ಮುಂಬೈ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 4 ವಿಕೆಟ್‌ಗಳೊಂದಿಗೆ ಒಟ್ಟು 8 ವಿಕೆಟ್ ಪಡೆದರು. ಇದಕ್ಕೂ ಮೊದಲು ಕಾನ್ಪುರ ಟೆಸ್ಟ್‌ನಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 3 ವಿಕೆಟ್‌ಗಳನ್ನು ಪಡೆದರು. ಈ ಸರಣಿಯೊಂದಿಗೆ ಅಶ್ವಿನ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ವಿಕೆಟ್ ಎಣಿಕೆ 66ಕ್ಕೆ ತಲುಪಿದೆ.
4 / 5
ಅಶ್ವಿನ್ ಈಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎಲ್ಲಾ ಟೆಸ್ಟ್ ಸರಣಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬೈ ಟೆಸ್ಟ್‌ನಲ್ಲಿ 8 ವಿಕೆಟ್‌ಗಳೊಂದಿಗೆ ಅವರು ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ ಅವರನ್ನು ಹಿಂದಿಕ್ಕಿದರು. ಹೆಡ್ಲಿ ಭಾರತದ ವಿರುದ್ಧ ಟೆಸ್ಟ್‌ನಲ್ಲಿ 65 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
5 / 5
ಇದರೊಂದಿಗೆ ಅಶ್ವಿನ್ ತಂಡದ ಗೆಲುವಿಗೆ ಹೆಚ್ಚು ಕೊಡುಗೆ ನೀಡಿದ ಟೆಸ್ಟ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತ ಗೆದ್ದ ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇವರ ಹೆಸರಲ್ಲಿ 296 ವಿಕೆಟ್‌ಗಳಿವೆ.
Published On - 11:18 am, Mon, 6 December 21