- Kannada News Photo gallery Cricket photos IND vs SA KL Rahul leaves behind MS Dhoni in major captaincy record after win over south africa
IND vs SA: ಆಫ್ರಿಕಾ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ರಾಹುಲ್..!
IND vs SA, KL Rahul: ನಾಯಕರಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಕೆಎಲ್ ರಾಹುಲ್ಗೆ ಕಳೆದ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ಸತತ 10ನೇ ಗೆಲುವು. ಈ ಮೂಲಕ ರಾಹುಲ್ ವಿಶೇಷ ನಾಯಕತ್ವದ ದಾಖಲೆಯಲ್ಲಿ ಧೋನಿಯನ್ನು ಹಿಂದಿಕ್ಕಿದ್ದಾರೆ.
Updated on: Dec 17, 2023 | 9:30 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಭಾರತ 8 ವಿಕೆಟ್‌ಗಳಿಂದ ಆತಿಥೇಯರನ್ನು ಸೋಲಿಸಿದೆ. ಇದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ನಾಯಕರಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಕೆಎಲ್ ರಾಹುಲ್ಗೆ ಕಳೆದ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ಸತತ 10ನೇ ಗೆಲುವು.

ಈ ಮೂಲಕ ರಾಹುಲ್ ವಿಶೇಷ ನಾಯಕತ್ವದ ದಾಖಲೆಯಲ್ಲಿ ಧೋನಿಯನ್ನು ಹಿಂದಿಕ್ಕಿದ್ದಾರೆ. ಸತತ ಅತಿ ಹೆಚ್ಚು ಜಯಗಳಿಸಿದ ಭಾರತೀಯ ನಾಯಕರಲ್ಲಿ ರಾಹುಲ್ ಅವರು ಧೋನಿಯನ್ನು ಮೀರಿಸಿದ್ದಾರೆ. ರಾಹುಲ್ ಸತತ 10 ನೇ ಗೆಲುವು ದಾಖಲಿಸಿದ್ದರೆ, ಧೋನಿ 2013 ರಲ್ಲಿ 9 ಪಂದ್ಯಗಳಲ್ಲಿ ಭಾರತವನ್ನು ಗೆಲುವಿನಲ್ಲಿ ಮುನ್ನಡೆಸಿದ್ದರು.

ಗಮನಾರ್ಹವಾಗಿ, ರೋಹಿತ್ ಶರ್ಮಾ ಭಾರತೀಯ ನಾಯಕರಿಂದ ಸತತವಾಗಿ ಜಯಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ನಾಯಕರಾಗಿ 2019 ರಿಂದ 2022 ರವರೆಗೆ ಸತತವಾಗಿ 19 ಪಂದ್ಯಗಳಲ್ಲಿ ಗೆಲುವುದ ದಾಖಲಿಸಿದ್ದಾರೆ.

ಎರಡನೇ ಸ್ಥಾನದಲ್ಲಿಯೂ ರೋಹಿತ್ ಇದ್ದು, 2018 ರಲ್ಲಿ ಅವರು ಸತತ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರು. ಹಾಗೆಯೇ 2017 ರಲ್ಲಿ ವಿರಾಟ್ ಕೊಹ್ಲಿ ಭಾರತವನ್ನು ಸತತ 12 ಪಂದ್ಯಗಳ ಗೆಲುವಿನಲ್ಲಿ ಮುನ್ನಡೆಸಿದ್ದರು.

ಇನ್ನು 2023 ರಲ್ಲೂ ರೋಹಿತ್ ಶರ್ಮಾ ಸತತ 10 ಪಂದ್ಯಗಳಲ್ಲಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರೆ, ಇದೀಗ ಕೆಎಲ್ ರಾಹುಲ್ 2022/ 23ರಲ್ಲಿ ನಾಯಕರಾಗಿ ಸತತ 10 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಅಲ್ಲದೆ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಪಿಂಕ್ ಏಕದಿನ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಈ ಹಿಂದೆ ಯಾವೊಬ್ಬ ಭಾರತೀಯ ನಾಯಕನೂ ಇಂತಹ ಸಾಧನೆ ಮಾಡಿರಲಿಲ್ಲ.




