IND vs SA: ಸೆಂಚುರಿಯನ್ ಟೆಸ್ಟ್‌ನಲ್ಲಿ ಬ್ಯಾಟ್ ಮಾಡದೆ ವಿಶಿಷ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ!
TV9 Web | Updated By: ಪೃಥ್ವಿಶಂಕರ
Updated on:
Dec 26, 2021 | 3:10 PM
IND vs SA: ರಾಟ್ ಕೊಹ್ಲಿ ಸೆಂಚುರಿಯನ್‌ನಲ್ಲಿ ನಾಣ್ಯವನ್ನು ಟಾಸ್ ಮಾಡುವ ಮೂಲಕ ಈ ದಾಖಲೆ ಮಾಡಿದರು. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ತಮ್ಮ ಹೆಸರಿನಲ್ಲಿ ದಾಖಲೆಯನ್ನು ಬರೆದುಕೊಂಡಿದ್ದಾರೆ.
1 / 5
ಪ್ರತಿಯೊಂದು ದಾಖಲೆಯ ಸ್ಕ್ರಿಪ್ಟ್ ಅನ್ನು ಬ್ಯಾಟ್‌ನಿಂದಲೇ ಬರೆಯುವುದು ಅನಿವಾರ್ಯವಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶಿಷ್ಟವಾದ ದಾಖಲೆಯೊಂದನ್ನು ಮಾಡಿದ್ದಾರೆ.
2 / 5
ವಿರಾಟ್ ಕೊಹ್ಲಿ ಸೆಂಚುರಿಯನ್‌ನಲ್ಲಿ ನಾಣ್ಯವನ್ನು ಟಾಸ್ ಮಾಡುವ ಮೂಲಕ ಈ ದಾಖಲೆ ಮಾಡಿದರು. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ತಮ್ಮ ಹೆಸರಿನಲ್ಲಿ ದಾಖಲೆಯನ್ನು ಬರೆದುಕೊಂಡಿದ್ದಾರೆ. ಈ ಹೊಸ ದಾಖಲೆಯು ವಿರಾಟ್ ಕೊಹ್ಲಿಯನ್ನು ಟಾಸ್ ಗೆದ್ದ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನನ್ನಾಗಿ ಮಾಡಿದೆ.
3 / 5
ವಿರಾಟ್ ಕೊಹ್ಲಿ ಈ ವಿಷಯದಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆಗೆ ಸಮನಾಗಿದ್ದರು. ಆದರೆ ಇದೀಗ ಈ ದಾಖಲೆಯನ್ನು ಸಂಪೂರ್ಣವಾಗಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 68 ನೇ ಟೆಸ್ಟ್‌ನಲ್ಲಿ 30 ನೇ ಟಾಸ್ ಗೆದ್ದು ಈ ಯಶಸ್ಸನ್ನು ಸಾಧಿಸಿದರು.
4 / 5
ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 47 ಟೆಸ್ಟ್‌ಗಳಲ್ಲಿ ನಾಯಕನಾಗಿ 29 ಟಾಸ್ ಗೆದ್ದಿದ್ದರು. ಇದೀಗ ವಿರಾಟ್ ಕೊಹ್ಲಿ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
5 / 5
ಟೆಸ್ಟ್‌ನಲ್ಲಿ ಅತಿ ಹೆಚ್ಚು ಟಾಸ್ ಗೆದ್ದ ಭಾರತೀಯ ನಾಯಕರ ಪಟ್ಟಿಯಲ್ಲಿ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. 60 ಟೆಸ್ಟ್‌ಗಳಲ್ಲಿ ನಾಯಕರಾಗಿ 26 ಬಾರಿ ಟಾಸ್ ಗೆದ್ದಿದ್ದಾರೆ.