IND vs SL: ಪಲ್ಲೆಕೆಲೆ ಪಿಚ್‌ನಲ್ಲಿ ಯಾರದ್ದು ಮೇಲುಗೈ? ಪಂದ್ಯದ ದಿನ ಹವಾಮಾನ ಹೇಗಿರಲಿದೆ?

IND vs SL 1st T20I: ಭಾರತ ಮತ್ತು ಶ್ರೀಲಂಕಾ ತಂಡಗಳ ಮೂರು ಟಿ20 ಪಂದ್ಯಗಳು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲ್ಲಿವೆ. ಹೀಗಾಗಿ ಪಲ್ಲೆಕೆಲೆ ಸ್ಟೇಡಿಯಂ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಪಂದ್ಯದ ದಿನ ಅಲ್ಲಿನ ಸ್ಥಳೀಯ ಹವಾಮಾನ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: Jul 26, 2024 | 9:38 PM

2024 ರ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದ ಶ್ರೀಲಂಕಾ ತಂಡ, ನಾಳೆ ಅಂದರೆ ಜುಲೈ 26 ರಂದು ಟಿ20 ವಿಶ್ವಕಪ್ ಚಾಂಪಿಯನ್ ಟೀಂ ಇಂಡಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡಲು ಸಜ್ಜಾಗಿದೆ. ಟೀಂ ಇಂಡಿಯಾದ ಕಮಾಂಡ್ ಸೂರ್ಯಕುಮಾರ್ ಯಾದವ್ ಕೈಯಲ್ಲಿದ್ದರೆ, ಶ್ರೀಲಂಕಾ ತಂಡದ ಕಮಾಂಡ್ ಚರಿತ್ ಅಸಲಂಕಾ ಕೈಯಲ್ಲಿದೆ.

1 / 6
ಉಭಯ ತಂಡಗಳ ಮೂರು ಟಿ20 ಪಂದ್ಯಗಳು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲ್ಲಿವೆ. ಹೀಗಾಗಿ ಪಲ್ಲೆಕೆಲೆ ಸ್ಟೇಡಿಯಂ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಪಂದ್ಯದ ದಿನ ಅಲ್ಲಿನ ಸ್ಥಳೀಯ ಹವಾಮಾನ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.

2 / 6
ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಆರಂಭದಲ್ಲಿ ಸ್ವಲ್ಪ ಸಹಾಯವನ್ನು ಪಡೆಯುವ ನಿರೀಕ್ಷೆಯಿದೆ. ಆದಾಗ್ಯೂ, ಬ್ಯಾಟ್ಸ್‌ಮನ್‌ಗಳು ಆರಂಭಿಕ ಓವರ್‌ಗಳನ್ನು ಎಚ್ಚರಿಕೆಯಿಂದ ಆಡಿದರೆ ನಂತರದ ಓವರ್‌ಗಳಲ್ಲಿ ಅವರು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಬಹುದು. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲಿ ಈ ಪಿಚ್‌ನಲ್ಲಿ ರನ್ ಗಳಿಸುವುದು ಸುಲಭವಾಗುತ್ತದೆ.

3 / 6
ಇಂತಹ ಪರಿಸ್ಥಿತಿಯಲ್ಲಿ ಈ ಪಿಚ್‌ನಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು. ಇಲ್ಲಿಯವರೆಗೆ ಇಲ್ಲಿ 23 ಟಿ20 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡಗಳು 12 ಬಾರಿ ಗೆದ್ದಿದ್ದರೆ, 9 ಪಂದ್ಯಗಳಲ್ಲಿ, ನಂತರ ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

4 / 6
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ವರದಿ ಪ್ರಕಾರ ಸುಮಾರು 3 ಗಂಟೆಗಳ ಕಾಲ ಜೋರಾದ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದಲ್ಲಿ ಮಳೆ ಬಂದರೆ ಮತ್ತು ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾದರೆ, ಮೊದಲ ಪಂದ್ಯವನ್ನು ರದ್ದುಗೊಳಿಸಬಹುದು.

5 / 6
ಭಾರತ ಮತ್ತು ಶ್ರೀಲಂಕಾ ನಡುವೆ ಇದುವರೆಗೆ ಒಟ್ಟು 29 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡ 19 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ತಂಡವು ಕೇವಲ 9 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

6 / 6
Follow us