- Kannada News Photo gallery Cricket photos IND vs SL Ashwin may break most wicket against Sri Lanka in international cricket
IND vs SL: ಮೊಹಾಲಿಯಲ್ಲಿ ಕಪಿಲ್ ದಾಖಲೆ ಬ್ರೇಕ್; ಬೆಂಗಳೂರಿನಲ್ಲಿ ಕುಂಬ್ಳೆ ದಾಖಲೆ ಮುರಿಯುವ ತವಕದಲ್ಲಿ ಅಶ್ವಿನ್!
IND vs SL: ಮೊಹಾಲಿಯಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್ ಗುರಿ ಇದೀಗ ಬೆಂಗಳೂರಿನಲ್ಲಿ ಅನಿಲ್ ಕುಂಬ್ಳೆ ದಾಖಲೆ ಮೇಲಿದೆ. ರೋಹಿತ್ ಶರ್ಮಾ ಅವರ 400 ನೇ ಅಂತಾರಾಷ್ಟ್ರೀಯ ಪಂದ್ಯ ಮತ್ತು ಅಶ್ವಿನ್‌ನ ಮತ್ತೊಂದು ಅದ್ಭುತ ದಾಖಲೆಗೆ ಈ ಪಂದ್ಯ ಸಾಕ್ಷಿಯಾಗಬಹುದು.
Updated on:Mar 11, 2022 | 6:03 PM
Share



ಅನಿಲ್ ಕುಂಬ್ಳೆ ಶ್ರೀಲಂಕಾ ವಿರುದ್ಧ 108 ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಪ್ರಸ್ತುತ ಶ್ರೀಲಂಕಾ ವಿರುದ್ಧ 101 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಹೀಗಿರುವಾಗ ಬೆಂಗಳೂರು ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳನ್ನು ಒಟ್ಟುಗೂಡಿಸಿ ಅಶ್ವಿನ್ 7 ವಿಕೆಟ್ ಪಡೆದರೆ ಕುಂಬ್ಳೆ ಅವರನ್ನು ಹಿಂದಿಕ್ಕಲಿದ್ದಾರೆ.

ಬೆಂಗಳೂರು ಟೆಸ್ಟ್ ಪಿಂಕ್ ಬಾಲ್ನಲ್ಲಿ ನಡೆಯಲಿರುವ ಕಾರಣ ಅಶ್ವಿನ್ಗೆ ಈ ದಾಖಲೆ ಮುರಿಯುವ ಅವಕಾಶವಿದೆ. ಜೊತೆಗೆ ಅಶ್ವಿನ್ ಗುಲಾಬಿ ಚೆಂಡಿನೊಂದಿಗೆ ಆಡಿದ 3 ಟೆಸ್ಟ್‌ಗಳಲ್ಲಿ 12 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ.

ಪಾಕಿಸ್ತಾನದ ವಾಸಿಂ ಅಕ್ರಮ್ ಶ್ರೀಲಂಕಾ ವಿರುದ್ಧ ಅತಿ ಹೆಚ್ಚು 155 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಹರ್ಭಜನ್ ಸಿಂಗ್ 114 ವಿಕೆಟ್‌ಗಳೊಂದಿಗೆ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.
Published On - 6:01 pm, Fri, 11 March 22
Related Photo Gallery
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ




