ಭಾರತದ ಅನುಭವಿ ಸ್ಪಿನ್ನರ್ ಅಶ್ವಿನ್ ಮಾರ್ಚ್ 5 ರ ಶನಿವಾರದಂದು ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಇದರಲ್ಲಿ ಎರಡನೇ ವಿಕೆಟ್ ಧನಂಜಯ ಡಿ ಸಿಲ್ವಾ ಅವರದ್ದು, ಅವರನ್ನು ಅಶ್ವಿನ್ ಎಲ್ ಬಿಡಬ್ಲ್ಯು ಮಾಡಿದರು. ಇದರೊಂದಿಗೆ ಅಶ್ವಿನ್ ನ್ಯೂಜಿಲೆಂಡ್‌ನ ಶ್ರೇಷ್ಠ ವೇಗದ ಬೌಲರ್ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದು ಅಶ್ವಿನ್ ಅವರ 432ನೇ ಟೆಸ್ಟ್ ವಿಕೆಟ್ ಆಗಿದ್ದು, ಈ ಮೂಲಕ ಅವರು ಹ್ಯಾಡ್ಲಿ (431) ಅವರನ್ನು ಹಿಂದಿಕ್ಕಿದರು. ಹ್ಯಾಡ್ಲಿ 86 ಟೆಸ್ಟ್‌ಗಳಲ್ಲಿ ಹಲವು ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಅಶ್ವಿನ್ ಈ ಸಾಧನೆಯನ್ನು ಕೇವಲ 85 ಟೆಸ್ಟ್‌ಗಳಲ್ಲಿ ಸಾಧಿಸಿದ್ದಾರೆ.
ಹ್ಯಾಡ್ಲಿ 1993 ರವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು, ಅವರ ದಾಖಲೆಯನ್ನು ಭಾರತದ ಪ್ರಸಿದ್ಧ ಆಲ್ ರೌಂಡರ್ ಕಪಿಲ್ ದೇವ್ ಮುರಿದರು. ಕಪಿಲ್ ತಮ್ಮ ವೃತ್ತಿಜೀವನದಲ್ಲಿ 434 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸುಮಾರು 7 ವರ್ಷಗಳ ಕಾಲ ಈ ದಾಖಲೆಯನ್ನು ಹೊಂದಿದ್ದರು ಮತ್ತು ಇದೀಗ ಈ ಪಂದ್ಯದಲ್ಲಿ ಅಶ್ವಿನ್ ಕಪಿಲ್ ಅವರನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ. ಕಪಿಲ್ ಅವರನ್ನು ಹಿಂದಿಕ್ಕಲು ಅಶ್ವಿನ್‌ಗೆ ಕೇವಲ 3 ವಿಕೆಟ್‌ಗಳ ಅಗತ್ಯವಿದೆ.
ಅಶ್ವಿನ್ ಅವರ ಎರಡು ವಿಕೆಟ್‌ಗಳ ನೆರವಿನಿಂದ ಭಾರತವು ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯದವರೆಗೆ 4 ವಿಕೆಟ್‌ಗಳಿಗೆ 104 ರನ್ ಗಳಿಸಿದೆ. ಹೀಗಿರುವಾಗ ಮೂರನೇ ದಿನ ಅಶ್ವಿನ್ ಇನ್ನೂ 3ವಿಕೆಟ್ ಕಬಳಿಸುವ ಮೂಲಕ ಕಪಿಲ್ ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.
Published On - 7:04 pm, Sat, 5 March 22