IND vs SL: ಟೀಂ ಇಂಡಿಯಾ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ 3ನೇ ಪಂದ್ಯದಲ್ಲೂ ಸೋಲು ಖಚಿತ
IND vs SL: ಎರಡನೇ ಪಂದ್ಯದಲ್ಲೂ ಆತಿಥೇಯ ತಂಡ ಟೀಂ ಇಂಡಿಯಾವನ್ನು 208 ರನ್‌ಗಳಿಗೆ ಆಲೌಟ್ ಮಾಡಿ, ಪಂದ್ಯವನ್ನು 32 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಾಸ್ತವವಾಗಿ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಅವಕಾಶ ಹೊಂದಿದ್ದ ಟೀಂ ಇಂಡಿಯಾ ತಾನು ಮಾಡಿಕೊಂಡ ತಪ್ಪುಗಳಿಂದಲೇ ಸೋಲಿನ ಬೆಲೆ ತೆರಬೇಕಾಯಿತು. ಇದೀಗ ಮೂರನೇ ಏಕದಿನಕ್ಕೂ ಮುನ್ನ ಭಾರತ ಈ 3 ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ, ತಂಡಕ್ಕೆ ಸೋಲು ಖಚಿತ.
1 / 8
ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾದ ನಿರಾಶಾದಾಯಕ ಪ್ರದರ್ಶನ ಮುಂದುವರೆದಿದೆ. ಆತಿಥೇಯ ಶ್ರೀಲಂಕಾ ತಂಡ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವನ್ನು ಕಸಿದುಕೊಳ್ಳುವುದರಲ್ಲಿ ಆತಿಥೇಯ ತಂಡ ಯಶಸ್ವಿಯಾಗಿತ್ತು.
2 / 8
ಇದಾದ ಬಳಿಕ ಎರಡನೇ ಪಂದ್ಯದಲ್ಲೂ ಆತಿಥೇಯ ತಂಡ ಟೀಂ ಇಂಡಿಯಾವನ್ನು 208 ರನ್‌ಗಳಿಗೆ ಆಲೌಟ್ ಮಾಡಿ, ಪಂದ್ಯವನ್ನು 32 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಾಸ್ತವವಾಗಿ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಅವಕಾಶ ಹೊಂದಿದ್ದ ಟೀಂ ಇಂಡಿಯಾ ತಾನು ಮಾಡಿಕೊಂಡ ತಪ್ಪುಗಳಿಂದಲೇ ಸೋಲಿನ ಬೆಲೆ ತೆರಬೇಕಾಯಿತು. ಇದೀಗ ಮೂರನೇ ಏಕದಿನಕ್ಕೂ ಮುನ್ನ ಭಾರತ ಈ 3 ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ, ತಂಡಕ್ಕೆ ಸೋಲು ಖಚಿತ.
3 / 8
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆಕ್ರಮಣಕಾರಿ ತಂತ್ರವನ್ನು ಅಳವಡಿಸಿಕೊಂಡಿತ್ತು. ಹೀಗಾಗಿ ಇಡೀ ಸರಣಿಯನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಆದರೆ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ವಿಪರೀತ ರಕ್ಷಣಾತ್ಮಕ ಆಟವಾಡುತ್ತಿರುವಂತೆ ಕಾಣುತ್ತಿದೆ.
4 / 8
ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಬ್ಯಾಟಿಂಗ್ ಬದಲಿಗೆ ರಕ್ಷಣಾತ್ಮಕವಾಗಿ ಆಡುತ್ತಿದ್ದಾರೆ. ಇದರಿಂದಾಗಿ ಶ್ರೀಲಂಕಾ ಬೌಲರ್‌ಗಳು ಪಂದ್ಯದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಇದರಿಂದಾಗಿ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಎಲ್‌ಬಿಡಬ್ಲ್ಯು ಮೂಲಕವೇ ಭಾರತದ 5 ವಿಕೆಟ್‌ಗಳನ್ನು ಉರುಳಿಸಿದ್ದರು.
5 / 8
ಕೊಲಂಬೊದ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ಸಹಾಯಕವಾಗುತ್ತಿದೆ. ಇದರಿಂದಾಗಿ ಶ್ರೀಲಂಕಾ 5 ಸ್ಪಿನ್ ಬೌಲರ್ ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಭಾರತ ತಂಡ ಸ್ಪಿನ್ ಬೌಲಿಂಗ್ ಅನ್ನು ನೆಚ್ಚಿಕೊಳ್ಳದೆ ತನ್ನ ಸಾಂಪ್ರದಾಯಿಕ ಬೌಲಿಂಗ್ ಲೈನ್ನೊಂದಿಗೆ ಆಡುತ್ತಿದೆ.
6 / 8
ತಂಡದಲ್ಲಿ ರಿಯಾನ್ ಪರಾಗ್ ಅವರಂತಹ ಸ್ಪಿನ್ ಬೌಲಿಂಗ್ ಆಟಗಾರರಿದ್ದಾರೆ. ಅವರು ಟಿ20 ಸರಣಿಯಲ್ಲೂ ಉತ್ತಮ ಬೌಲಿಂಗ್ ಮಾಡಿದ್ದಾರೆ. ಆದರೆ ಅವರ ಸ್ಥಾನದಲ್ಲಿ ಶಿವಂ ದುಬೆಗೆ ತಂಡದಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೆ ಇದುವರೆಗಿನ ಸರಣಿಯಲ್ಲಿ ಶಿವಂ ದುಬೆ ಸಂಪೂರ್ಣ ವಿಫಲರಾಗಿದ್ದಾರೆ.
7 / 8
ಎರಡನೇ ಏಕದಿನ ಪಂದ್ಯದಲ್ಲಿ ಭಾರತ, ಆತಿಥೇಯ ಶ್ರೀಲಂಕಾವನ್ನು 35 ಓವರ್‌ಗಳಲ್ಲಿ 136 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿತ್ತು. ಆದರೆ ಇದಾದ ಬಳಿಕ ಶ್ರೀಲಂಕಾದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡದ ಸ್ಕೋರನ್ನು 240 ರನ್‌ಗಳಿಗೆ ಕೊಂಡೊಯ್ದರು.
8 / 8
ಮೊದಲ ಪಂದ್ಯದಲ್ಲಿ ಆತಿಥೇಯ ತಂಡ 142 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು 230 ರನ್ ಗಳಿಸುವುದಕ್ಕೂ ಕಷ್ಟಪಡುತ್ತಿತ್ತು. ಆದರೆ ಆ ಪಂದ್ಯದಲ್ಲೂ ಶ್ರೀಲಂಕಾದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ, ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದಿದ್ದರು.