IND vs WI: ಕೊಹ್ಲಿ- ರೋಹಿತ್​ ಗುಂಪಿಗೆ ಸೇರಲು ಸಂಜು ಸ್ಯಾಮ್ಸನ್​ಗೆ 21 ರನ್ ಮಾತ್ರ ಬೇಕು..!

Updated on: Aug 03, 2023 | 8:32 AM

Sanju Samson: ವಾಸ್ತವವಾಗಿ ಟಿ20 ಕ್ರಿಕೆಟ್​ನಲ್ಲಿ 6000 ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆಹಾಕಿದ ಭಾರತದ ಬ್ಯಾಟರ್​ಗಳ ಪಟ್ಟಿಯನ್ನು ಸೇರಲು ಸಂಜುಗೆ 21 ರನ್ ಅಗತ್ಯವಿದೆ.

1 / 13
ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಸ್ಟಾರ್ ಇಂಡಿಯನ್ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಸ್ಟಾರ್ ಇಂಡಿಯನ್ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

2 / 13

ಇದೀಗ ಉಭಯ ತಂಡಗಳ ನಡುವೆ ಆರಂಭವಾಗಲ್ಲಿರುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದು, 21 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಾಖಲೆಗಳ ಶೂರರ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ.

3 / 13

ವಾಸ್ತವವಾಗಿ ಟಿ20 ಕ್ರಿಕೆಟ್​ನಲ್ಲಿ 6000 ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆಹಾಕಿದ ಭಾರತದ ಬ್ಯಾಟರ್​ಗಳ ಪಟ್ಟಿಯನ್ನು ಸೇರಲು ಸಂಜುಗೆ 21 ರನ್ ಅಗತ್ಯವಿದೆ. ಇದುವರೆಗೆ ಆಡಿರುವ 241 ಟಿ20 ಪಂದ್ಯಗಳಲ್ಲಿ ಸಂಜು 5979 ರನ್ ಕಲೆಹಾಕಿದ್ದಾರೆ.

4 / 13

ಭಾರತ ಪರ 17 ಟಿ20 ಪಂದ್ಯಗಳಲ್ಲಿ 20.06 ಸರಾಸರಿಯಲ್ಲಿ 301 ರನ್ ಗಳಿಸಿರುವ ಸಂಜು, 152 ಐಪಿಎಲ್ ಪಂದ್ಯಗಳಿಂದ 3888 ರನ್ ಗಳಿಸಿದ್ದಾರೆ.

5 / 13

ಮೊದಲ ಪಂದ್ಯದಲ್ಲಿ ಸಂಜು 21 ರನ್ ಬಾರಿಸಿದರೆ, 6000 ಟಿ20 ರನ್ ಪೂರ್ಣಗೊಳಿಸಿದ 13ನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇನ್ನು ಭಾರತದ ಪರ 6000 ಟಿ20 ರನ್ ಪೂರೈಸಿದ ಪ್ರಮುಖ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

6 / 13

ಇದುವರೆಗೆ ಆಡಿರುವ 374 ಟಿ20 ಪಂದ್ಯಗಳಿಂದ 11,965 ರನ್‌ ಕಲೆಹಾಕಿರುವ ವಿರಾಟ್ ಕೊಹ್ಲಿ ಆಟದ ಅತ್ಯಂತ ಕಡಿಮೆ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳಲ್ಲಿ ನಂ. 1 ಸ್ಥಾನವನ್ನು ಆಕ್ರಮಿಸಿಕೊಂಡಿದ್ದರೆ, ವಿಶ್ವ ಮಟ್ಟದಲ್ಲಿ ಈ ಸಾಧನೆ ಮಾಡಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

7 / 13

ಹಾಗೆಯೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 11,035 ರನ್‌ಗಳೊಂದಿಗೆ ಭಾರತದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದರೆ, ವಿಶ್ವ ಮಟ್ಟದಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

8 / 13

329 ಪಂದ್ಯಗಳಿಂದ 9645 ರನ್ ಕಲೆಹಾಕಿರುವ ಶಿಖರ್ ಧವನ್ ಮೂರನೇ ಸ್ಥಾನದಲ್ಲಿದ್ದಾರೆ.

9 / 13

336 ಪಂದ್ಯಗಳಿಂದ 8654 ರನ್ ಕಲೆಹಾಕಿರುವ ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

10 / 13

ಇನ್ನು ಐದನೇ ಸ್ಥಾನದಲ್ಲಿರುವ ಕನ್ನಡಿಗ ರಾಬಿನ್ ಉತ್ತಪ್ಪ291 ಪಂದ್ಯಗಳಿಂದ 7272 ರನ್ ಕಲೆಹಾಕಿದ್ದಾರೆ.

11 / 13

377 ಪಂದ್ಯಗಳಲ್ಲಿ 7271 ರನ್ ಬಾರಿಸಿರುವ ಮಾಜಿ ನಾಯಕ ಎಂಎಸ್ ಧೋನಿ ಆರನೇ ಸ್ಥಾನದಲ್ಲಿದ್ದಾರೆ.

12 / 13

386 ಪಂದ್ಯಗಳಿಂದ 7081 ರನ್ ಬಾರಿಸಿರುವ ದಿನೇಶ್ ಕಾರ್ತಿಕ್​ಗೆ ಏಳನೇ ಸ್ಥಾನ.

13 / 13

ಎಂಟನೇ ಸ್ಥಾನದಲ್ಲಿರುವ ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ 212 ಪಂದ್ಯಗಳಿಂದ 7066 ರನ್ ಕಲೆಹಾಕಿದ್ದಾರೆ.

Loading...
Unable to load recommendations.
Follow Us