- Kannada News Photo gallery Cricket photos ICC Test Rankings: Ravindra Jadeja third-ranked Test bowler
ICC Test Rankings: ಟೆಸ್ಟ್ ಬೌಲರ್ಗಳ ರ‍್ಯಾಂಕಿಂಗ್: ಅಗ್ರ ಹತ್ತರಲ್ಲಿ ಮೂವರು ಭಾರತೀಯರಿಗೆ ಸ್ಥಾನ
ICC Test Rankings: ಆ್ಯಶಸ್ ಸರಣಿಯ ಅಂತಿಮ ಪಂದ್ಯದ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಸ್ಟುವರ್ಟ್ ಬ್ರಾಡ್ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
Updated on: Aug 02, 2023 | 9:25 PM

ICC Test Rankings: ಐಸಿಸಿ ಟೆಸ್ಟ್ ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಇನ್ನು ತೃತೀಯ ಸ್ಥಾನದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆ್ಯಶಸ್ ಸರಣಿಯ ಅಂತಿಮ ಪಂದ್ಯದ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಸ್ಟುವರ್ಟ್ ಬ್ರಾಡ್ 4ನೇ ಸ್ಥಾನದಲ್ಲಿರುವುದು ವಿಶೇಷ. ಹಾಗಿದ್ರೆ ಟೆಸ್ಟ್ ಬೌಲರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿರುವ ಟಾಪ್-10 ಆಟಗಾರರು ಯಾರೆಲ್ಲಾ ಎಂದು ನೋಡೋಣ...

1- ರವಿಚಂದ್ರನ್ ಅಶ್ವಿನ್ (ಭಾರತ)- 879 ಪಾಯಿಂಟ್ಸ್

2- ಕಗಿಸೊ ರಬಾಡ (ಸೌತ್ ಆಫ್ರಿಕಾ)- 825 ಪಾಯಿಂಟ್ಸ್

3- ರವೀಂದ್ರ ಜಡೇಜಾ (ಭಾರತ)- 782 ಪಾಯಿಂಟ್ಸ್

4- ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)- 776 ಪಾಯಿಂಟ್ಸ್

5- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 775 ಪಾಯಿಂಟ್ಸ್

6- ಶಾಹಿನ್ ಅಫ್ರಿದಿ (ಪಾಕಿಸ್ತಾನ್)- 762 ಪಾಯಿಂಟ್ಸ್

7- ಒಲಿ ರಾಬಿನ್ಸನ್ (ಇಂಗ್ಲೆಂಡ್)- 762 ಪಾಯಿಂಟ್ಸ್

8- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)- 761 ಪಾಯಿಂಟ್ಸ್

9- ನಾಥನ್ ಲಿಯಾನ್ (ಆಸ್ಟ್ರೇಲಿಯಾ)- 760 ಪಾಯಿಂಟ್ಸ್

10- ಜಸ್ಪ್ರೀತ್ ಬುಮ್ರಾ (ಭಾರತ)- 756 ಪಾಯಿಂಟ್ಸ್



















