- Kannada News Photo gallery Cricket photos IND vs WI 1st Test Yashasvi Jaiswal becomes first Indian cricketer to achieve massive record
Yashasvi Jaiswal: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆಗಳ ಶಿಖರ ಏರಿದ ಯಶಸ್ವಿ ಜೈಸ್ವಾಲ್..!
IND vs WI 1st Test: ವಿಂಡೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೈಸ್ವಾಲ್ 171 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡುವ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಹಲವು ದಾಖಲೆ ಬರೆದಿದ್ದಾರೆ.
Updated on: Jul 15, 2023 | 9:15 AM

ಡೊಮಿನಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿಕೊಟ್ಟಿದ್ದಾರೆ. ವಿಂಡೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೈಸ್ವಾಲ್ 171 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡುವ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಹಲವು ದಾಖಲೆ ಬರೆದಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಭಾರತದ ಪರ ಈ ಸಾಧನೆ ಮಾಡಿದ 17ನೇ ಬ್ಯಾಟರ್ ಎಂಬ ಖ್ಯಾತಿಗೆ ಜೈಸ್ವಾಲ್ ಭಾಜನರಾದರು. ಆರಂಭಿಕನಾಗಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರನೆನಿಸಿಕೊಂಡಿದಲ್ಲದೆ, ವೆಸ್ಟ್ ಇಂಡೀಸ್ ವಿರುದ್ಧ ಈ ದಾಖಲೆ ಬರೆದ ಮೊದಲ ಬ್ಯಾಟರ್ ಎನಿಸಿಕೊಂಡರು.

ಹಾಗೆಯೇ ನಾಯಕ ರೋಹಿತ್ ಶರ್ಮಾ ಅವರೊಂದಿಗೆ 229 ರನ್‌ಗಳ ದಾಖಲೆ ಜೊತೆಯಾಟವನ್ನು ಹಂಚಿಕೊಂಡರು. ಆ ಬಳಿಕ ವಿರಾಟ್ ಕೊಹ್ಲಿಯೊಂದಿಗೆ 110 ರನ್‌ಗಳ ಜೊತೆಯಾಟವನ್ನಾಡಿದರು.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 150 ರನ್ ಪೂರ್ಣಗೊಳಿಸಿದ ತಕ್ಷಣ ಜೈಸ್ವಾಲ್, ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಹಾಗೆಯೇ ಚೊಚ್ಚಲ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟರ್ ಕಲೆಹಾಕಿದ ಮೂರನೇ ಗರಿಷ್ಠ ಸ್ಕೋರ್ ಇದಾಗಿದೆ.

ಜೈಸ್ವಾಲ್ ಚೊಚ್ಚಲ ಟೆಸ್ಟ್‌ನಲ್ಲಿ 171 ರನ್ ಕಲೆಹಾಕಿದರೆ, ಟೀಂ ಇಂಡಿಯಾದ ಮಾಜಿ ಆರಂಭಿಕ ಶಿಖರ್ ಧವನ್, ಚೊಚ್ಚಲ ಟೆಸ್ಟ್‌ನಲ್ಲಿ ಆಸೀಸ್ ವಿರುದ್ಧ 187 ಬಾರಿಸಿದ್ದರು. ಹಾಗೆಯೇ ನಾಯಕ ರೋಹಿತ್ ಶರ್ಮಾ ಕೂಡ ವೆಸ್ಟ್ ಇಂಡೀಸ್ ವಿರುದ್ಧ177 ರನ್ ಬಾರಿಸಿದ್ದರು.

ಇನ್ನು ಭಾರತದ ಹೊರಗೆ ಚೊಚ್ಚಲ ಟೆಸ್ಟ್ನಲ್ಲೇ ಅತ್ಯಧಿಕ ಸ್ಕೋರ್ ಕಲೆಹಾಕಿದ ದಾಖಲೆ ಬರೆದ ಜೈಸ್ವಾಲ್, ಭಾರತದ ಪರ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಎನಿಸಿಕೊಂಡರು. ಹಾಗಿದ್ದರೆ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಟಾಪ್ 5 ಬ್ಯಾಟರ್ಗಳು ಯಾರು ಎಂಬುದನ್ನು ನೋಡುವುದಾದರೆ..

187 - ಶಿಖರ್ ಧವನ್ - vs ಆಸ್ಟ್ರೇಲಿಯಾ (ಮೊಹಾಲಿ, 2013)

177 - ರೋಹಿತ್ ಶರ್ಮಾ - vs ವೆಸ್ಟ್ ಇಂಡೀಸ್ (ಕೋಲ್ಕತ್ತಾ, 2013)

171 - ಯಶಸ್ವಿ ಜೈಸ್ವಾಲ್ - vs ವೆಸ್ಟ್ ಇಂಡೀಸ್ (ಡೊಮಿನಿಕಾ, 2023)

137 - ಗುಂಡಪ್ಪ ವಿಶ್ವನಾಥ್ - vs ಆಸ್ಟ್ರೇಲಿಯಾ (ಕಾನ್ಪುರ್, 1969)

134 - ಪೃಥ್ವಿ ಶಾ - vs ವೆಸ್ಟ್ ಇಂಡೀಸ್ (ರಾಜ್‌ಕೋಟ್, 2018)




