IND vs WI: ಅತ್ಯಲ್ಪ ಓವರ್​ಗಳಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಟೀಂ ಇಂಡಿಯಾ

Rohit Sharma- Yashasvi Jaiswal: ಈ ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲಿ ಇಬ್ಬರೂ 229, 139 ಮತ್ತು 98 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ, ಇಬ್ಬರೂ ಒಟ್ಟು 3 ಇನ್ನಿಂಗ್ಸ್‌ಗಳಲ್ಲಿ 466 ರನ್ ಸೇರಿಸಿದ್ದಾರೆ.

ಪೃಥ್ವಿಶಂಕರ
|

Updated on: Jul 24, 2023 | 6:41 AM

ಭಾರತದ ವೆಸ್ಟ್ ಇಂಡೀಸ್ ಪ್ರವಾಸವು ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಕ್ಕೆ ಹೊಸ ಯುಗಕ್ಕೆ ನಾಂದಿಯಾಗಿದೆ. ಅದರ ಮೊದಲ ಹೆಜ್ಜೆಯಂತೆ ಆರಂಭಿಕ ಜೋಡಿಯಲ್ಲಿ ಬದಲಾವಣೆ ಕಂಡುಬಂದಿದೆ. ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಜುಗಲ್​ಬಂದಿ ಯಶ ಕಂಡಿದೆ.

1 / 7
ವಿಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಮೂರೂ ಇನ್ನಿಂಗ್ಸ್​ಗಳಲ್ಲಿ ಈ ಜೋಡಿ ಕನಿಷ್ಠ ಅರ್ಧಶತಕದ ಜೊತೆಯಾಟ ನೀಡಿದೆ. ಇದು ಟೀಂ ಇಂಡಿಯಾದ ಭರವಸೆಯನ್ನು ಹೆಚ್ಚಿಸಿದೆ. ಮೊದಲ ಟೆಸ್ಟ್​ನಲ್ಲಿ ದ್ವಿಶತಕದ ಜೊತೆಯಾಟವನ್ನಾಡಿ ದಾಖಲೆ ಬರೆದಿದ್ದ ಈ ಜೋಡಿ, ಎರಡನೇ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಮತ್ತೊಂದು ದಾಖಲೆ ಬರೆದಿದೆ.

2 / 7
ಪೋರ್ಟ್ ಆಫ್ ಸ್ಪೇನ್ ಟೆಸ್ಟ್‌ನ ನಾಲ್ಕನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ, ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕೇವಲ 34 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಇಬ್ಬರೂ 8.33 ರ ರನ್‌ರೇಟ್​ನಲ್ಲಿ ರನ್ ಕಲೆಹಾಕಿದರು. ಇದು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕದ ಪಾಲುದಾರಿಕೆಯ ದಾಖಲೆಯಾಗಿದೆ.

3 / 7
ಅಲ್ಲದೆ ಇವರಿಬ್ಬರೂ 11.5 ಓವರ್‌ಗಳಲ್ಲಿ 98 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಮುಂದಿನ 3 ಎಸೆತಗಳಲ್ಲಿ ಟೀಂ ಇಂಡಿಯಾ 100 ರನ್ ಪೂರೈಸಿತು. ಅಂದರೆ 12.2 ಓವರ್‌ಗಳಲ್ಲಿ ತಂಡದ 100 ರನ್‌ಗಳು ಪರ್ಣಗೊಂಡವು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಇಷ್ಟು ವೇಗವಾಗಿ 100 ರನ್ ಪೂರೈಸಿಲ್ಲ. ಅಂದರೆ ಇದು ಕೂಡ ಟೆಸ್ಟ್​ನಲ್ಲಿ ಅತೀ ವೇಗದ ಶತಕದ ಜೊತೆಯಾಟ ಎಂಬ ದಾಖಲೆ ಬರೆಯಿತು.

4 / 7
ಅಷ್ಟೇ ಅಲ್ಲ, ಈ ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲಿ ಇಬ್ಬರೂ 229, 139 ಮತ್ತು 98 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ, ಇಬ್ಬರೂ ಒಟ್ಟು 3 ಇನ್ನಿಂಗ್ಸ್‌ಗಳಲ್ಲಿ 466 ರನ್ ಸೇರಿಸಿದ್ದಾರೆ. ಇದು ವಿದೇಶದಲ್ಲಿ ಯಾವುದೇ ಸರಣಿಯಲ್ಲಿ ಭಾರತಕ್ಕೆ ಆರಂಭಿಕ ಜೊತೆಯಾಟದ ಹೊಸ ದಾಖಲೆಯಾಗಿದೆ.

5 / 7
ಎರಡನೇ ಇನಿಂಗ್ಸ್‌ನಲ್ಲಿ ವೇಗವಾಗಿ ಬ್ಯಾಟ್ ಮಾಡಿದ ಭಾರತ ಕೇವಲ 24 ಓವರ್‌ಗಳಲ್ಲಿ 181 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 7.54 ರ ರನ್​ರೇಟ್​ನಲ್ಲಿ ಭಾರತ ರನ್ ಕಲೆಹಾಕಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯಾಗಿದೆ. ಪಾಕಿಸ್ತಾನದ ವಿರುದ್ಧ 241 ರನ್ ಬಾರಿಸಿದ್ದ ಆಸ್ಟ್ರೇಲಿಯಾ (7.53) ಹೆಸರಿನಲ್ಲಿ ಕನಿಷ್ಠ 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಹಿಂದಿನ ದಾಖಲೆಯಾಗಿತ್ತು.

6 / 7
ಸದ್ಯ 2ನೇ ಇನ್ನಿಂಗ್ಸ್ ಆರಂಭಿಸಿರುವ ವಿಂಡೀಸ್ 2 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ. ಈಗ ಪಂದ್ಯದ ಕೊನೆಯ ದಿನ ವಿಂಡೀಸ್ ಗೆಲುವಿಗೆ 289 ರನ್​ಗಳು ಬೇಕಿದ್ದರೆ, ಭಾರತದ ಗೆಲುವಿಗೆ 8 ವಿಕೆಟ್​ಗಳು ಅವಶ್ಯಕತೆ ಇದೆ.

7 / 7
Follow us
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ

ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ