AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಸಿಕ್ಸರ್ ಸಿಡಿಸಿ ಕಿಂಗ್ ಕೊಹ್ಲಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ..!

Hardik Pandya: ವಾಸ್ತವವಾಗಿ ಸಿಕ್ಸರ್ ಸಿಡಿಸುವ ಮೂಲಕ ಜಯ ತಂದುಕೊಟ್ಟ ಪಾಂಡ್ಯ, ಟಿ20ಯಲ್ಲಿ ಈ ರೀತಿಯಾಗಿ ಅಂದರೆ, ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು 4ನೇ ಬಾರಿಗೆ ಗೆಲುವಿನ ದಡ ಮುಟ್ಟಿಸಿದರು. 18ನೇ ಓವರ್​ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಚಕ ಜಯ ತಂದುಕೊಟ್ಟ ಪಾಂಡ್ಯ ಈ ಗೆಲುವಿನ ಸಿಕ್ಸರ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿದರು.

ಪೃಥ್ವಿಶಂಕರ
|

Updated on:Aug 09, 2023 | 10:42 AM

Share
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ವಿಂಡೀಸ್ ನೀಡಿದ 159 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಇನ್ನು 13 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

1 / 7
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಸೂರ್ಯಕುಮಾರ್ ಯಾದವ್ 83 ರನ್ ಹಾಗೂ ತಿಲಕ್ ವರ್ಮಾ ಅಜೇಯ 49 ರನ್​ಗಳ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅಜೇಯ 20 ರನ್ ಬಾರಿಸಿದರು.

2 / 7
ಅದರಲ್ಲೂ 18ನೇ ಓವರ್​ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಹಾರ್ದಿಕ್ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದು ವಿಶೇಷವಾಗಿತ್ತು. ಅಲ್ಲದೆ ಈ ಗೆಲುವಿನ ಸಿಕ್ಸರ್ ಜೊತೆಗೆ ಪಾಂಡ್ಯ, ಕೊಹ್ಲಿ ದಾಖಲೆಯನ್ನು ಮುರಿದರು.

3 / 7
ವಾಸ್ತವವಾಗಿ ಸಿಕ್ಸರ್ ಸಿಡಿಸುವ ಮೂಲಕ ಜಯ ತಂದುಕೊಟ್ಟ ಪಾಂಡ್ಯ, ಟಿ20ಯಲ್ಲಿ ಈ ರೀತಿಯಾಗಿ ಅಂದರೆ, ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು 4ನೇ ಬಾರಿಗೆ ಗೆಲುವಿನ ದಡ ಮುಟ್ಟಿಸಿದರು.

4 / 7
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಚುಟುಕು ಮಾದರಿಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ 4 ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಈ ದಾಖಲೆಯನ್ನು ಪಾಂಡ್ಯ ಸರಿಗಟ್ಟಿದ್ದಾರೆ.

5 / 7
ಇನ್ನು ಈ ಟಿ20 ಸರಣಿ ಮೂಲಕ ಭಾರತ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಯುವ ಬ್ಯಾಟರ್ ತಿಲಕ್ ವರ್ಮಾ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನಿಡಿದ್ದಾರೆ. 2ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ತಿಲಕ್, ಈ ಪಂದ್ಯದಲ್ಲೂ ಅಜೇಯ 49 ರನ್ ಸಿಡಿಸಿದರು.

6 / 7
ಕೇವಲ 1 ರನ್​ಗಳಿಂದ ಅರ್ಧಶತಕ ವಂಚಿತರಾದ ತಿಲಕ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡುವಾಗ 49 ರನ್ ಗಳಿಸಿ ಅಜೇಯರಾಗಿ ಉಳಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. ಇವರಿಗೂ ಮುನ್ನ 2016ರಲ್ಲಿ ಸುರೇಶ್ ರೈನಾ 49 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು.

7 / 7

Published On - 10:33 am, Wed, 9 August 23