IND vs WI: ಮೊದಲ ಏಕದಿನಕ್ಕೆ ಭಾರತ ರೆಡಿ: ಧವನ್ ಪಡೆಯಿಂದ ಭರ್ಜರಿ ಅಭ್ಯಾಸ

Edited By:

Updated on: Jul 22, 2022 | 10:12 AM

India vs West Indies: ಆಂಗ್ಲರ ನಾಡಿನಿಂದ ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಿರುವ ಟೀಮ್ ಇಂಡಿಯಾ ಇಂದು ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಟ್ರಿನಿಡಾಡ್​ ನ ಕ್ವೀನ್ಸ್ ಪಾರ್ಕ್​ ಓವಲ್​ ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.

1 / 6
ಆಂಗ್ಲರ ನಾಡಿನಿಂದ ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಿರುವ ಟೀಮ್ ಇಂಡಿಯಾ ಇಂದು ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಟ್ರಿನಿಡಾಡ್​ ನ ಕ್ವೀನ್ಸ್ ಪಾರ್ಕ್​ ಓವಲ್​ ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.

ಆಂಗ್ಲರ ನಾಡಿನಿಂದ ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಿರುವ ಟೀಮ್ ಇಂಡಿಯಾ ಇಂದು ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಟ್ರಿನಿಡಾಡ್​ ನ ಕ್ವೀನ್ಸ್ ಪಾರ್ಕ್​ ಓವಲ್​ ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.

2 / 6

ರೋಹಿತ್‌ ಶರ್ಮ ಅವರ ಅನುಪಸ್ಥಿತಿಯಲ್ಲಿ ಏಕದಿನ ಸರಣಿಗೆ ತಂಡದ ನಾಯಕತ್ವವನ್ನು ಶಿಖರ್‌ ಧವನ್‌ ಅವರು ವಹಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಉಪ ನಾಯಕನಾಗಿದ್ದಾರೆ.

3 / 6

ಆದರೆ, ರವೀಂದ್ರ ಜಡೇಜಾ ಮೊಣಕಾಲಿಗೆ ಪೆಟ್ಟುಮಾಡಿಕೊಂಡಿದ್ದು ಮೂರೂ ಏಕದಿನ ಪಂದ್ಯಕ್ಕೆ ಲಭ್ಯರಿರುವುದು ಅನುಮಾನ ಎನ್ನಲಾಗಿದೆ. ಹೀಗಾದಲ್ಲಿ ಯುಜ್ವೇಂದ್ರ ಚಹಲ್ ತಂಡದ ಉಪ ನಾಯಕತ್ವ ವಹಿಸಲಿದ್ದಾರೆ.

4 / 6

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ ಪ್ರೀತ್ ಬೂಮ್ರಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಯುವ ಪಡೆಯಿಂದ ಕೂಡಿರುವ ಭಾರತದ ಆಡುವ ಬಳಗ ಹೇಗಿರಲಿದೆ ಎಂಬುದು ಕುತೂಹಲ.

5 / 6

ಧವನ್ ಜೊತೆ ಇಶಾನ್ ಕಿಶನ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆವೇಶ್ ಖಾನ್, ಪ್ರಸಿದ್ಧ ಕೃಷ್ಣ ಮತ್ತು ಆರ್ಷದೀಪ್ ಸಿಂಗ್ ಅವರಿಗೆ ಈ ಸರಣಿ ಅಗ್ನಿಪರೀಕ್ಷೆ ಎನ್ನಬಹುದು.

6 / 6

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7 ಗಂಟೆಯಿಂದ ಶುರುವಾಗಲಿದೆ. ನೇರಪ್ರಸಾರ ಡಿಡಿ ನ್ಯಾಷನಲ್ ಚಾನೆಲ್ ​ನಲ್ಲಿ ಇರಲಿದೆ. ಹಾಗೆಯೇ ಸ್ಪೋರ್ಟ್ಸ್ ಮ್ಯಾಕ್ಸ್​ ಚಾನೆಲ್ ​ನಲ್ಲೂ ಲೈವ್ ಇರಲಿದೆ. ಫ್ಯಾನ್‌ಕೋಡ್ ಆ್ಯಪ್​ ಮತ್ತು ವೆಬ್​ ಸೈಟ್ ಮೂಲಕ ಲೈವ್ ಸ್ಟೀಮಿಂಗ್ ವೀಕ್ಷಿಸಬಹುದು.

Published On - 10:12 am, Fri, 22 July 22

Loading...
Unable to load recommendations.
Follow Us