
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅಮೋಘ ವಿಶೇಷ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್‌ನ ಮಧ್ಯಮ ಕ್ರಮಾಂಕದ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಚಹಾಲ್ ವೃತ್ತಿಜೀವನದ 100 ವಿಕೆಟ್‌ಗಳನ್ನು ಪೂರೈಸಿದರು. ಚಹಲ್ ಅವರ ನೂರನೇ ಬಲಿಯಾಗಿದ್ದು ನಿಕೋಲಸ್ ಪೂರನ್. ಇದರ ಬೆನ್ನಲ್ಲೇ ಕೀರನ್ ಪೊಲಾರ್ಡ್ ಅವರನ್ನೂ ಕೂಡ ಬೌಲ್ಡ್ ಮಾಡಿದರು.

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ ಅವರು ತಮ್ಮ ಮೊದಲ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು LBW ಔಟ್ ಮಾಡಿದರು. ಇದರೊಂದಿಗೆ ಚಹಲ್ ತಮ್ಮ 60ನೇ ಪಂದ್ಯದಲ್ಲಿ 100 ವಿಕೆಟ್ ಪೂರೈಸಿದರು. 56 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊಹಮ್ಮದ್ ಶಮಿ ಹೆಸರಿನಲ್ಲಿ ಭಾರತದ ಪರ ಅತ್ಯಂತ ವೇಗವಾಗಿ 100 ವಿಕೆಟ್ ಪೂರೈಸಿದ ದಾಖಲೆ ಇದೆ.

ಸದ್ಯ ಚಹಾಲ್ ಏಕದಿನದಲ್ಲಿ 100 ವಿಕೆಟ್ ಪಡೆದ ಭಾರತದ 22ನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 100 ವಿಕೆಟ್‌ಗಳನ್ನು ಪಡೆದ ಒಂಬತ್ತನೇ ಸ್ಪಿನ್ನರ್ ಆಗಿದ್ದಾರೆ. 269 ಪಂದ್ಯಗಳಲ್ಲಿ 334 ವಿಕೆಟ್‌ಗಳನ್ನು ಕಬಳಿಸಿದ ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಭಾರತದ ಪರ ಅತೀ ಹೆಚ್ಚು ವಿಕೆಟ್‌ಗಳನ್ನು ಪಡೆದ ಸ್ಪಿನ್ನರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

100ನೇ ವಿಕೆಟ್‌ನ ನಂತರ, ಚಾಹಲ್ ತನ್ನ ಗೂಗ್ಲಿ ಮತ್ತು ಲೆಗ್ ಬ್ರೇಕ್‌ನೊಂದಿಗೆ ವಿಂಡೀಸ್ ಆಟಗಾರರಿಗೆ ಆಘಾತ ನೀಡಿದರು. ಪೂರನ್ ಅವರ ವಿಕೆಟ್ ಪಡೆದ ನಂತರ, ಚಹಲ್ ಮುಂದಿನ ಎಸೆತದಲ್ಲಿ ವಿಂಡೀಸ್ ನಾಯಕ ಪೊಲಾರ್ಡ್ ಅವರನ್ನು ಬೌಲ್ಡ್ ಮಾಡಿದರು. ಅಲ್ಲದೆ ಚಹಲ್ ತನ್ನ ಎರಡನೇ ಓವರ್‌ನಲ್ಲಿ ಶಮ್ರಾ ಬ್ರೂಕ್ಸ್‌ನ ವಿಕೆಟ್ ಪಡೆದರು.