IND vs ZIM: ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ಸೃಷ್ಟಿಸುವ ತವಕದಲ್ಲಿ ಟೀಂ ಇಂಡಿಯಾ..!
IND vs ZIM: ಐದು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ ಈಗ ಜಿಂಬಾಬ್ವೆ ಪ್ರವಾಸ ಮಾಡಿದೆ. ಈ ಸರಣಿಗೆ ಬಿಸಿಸಿಐ ಯುವ ಆಟಗಾರರಿಗೆ ಅವಕಾಶ ನೀಡಿದೆ. ತಂಡದ ನಾಯಕತ್ವ ಶುಭಮನ್ ಗಿಲ್ ವಹಿಸಿಕೊಂಡಿದ್ದು, ಚೊಚ್ಚಲ ಪಂದ್ಯದಲ್ಲಿ ವಿಶ್ವದಾಖಲೆ ಸೃಷ್ಟಿಯ ಅವಕಾಶ ಟೀಂ ಇಂಡಿಯಾಕ್ಕಿದೆ.
1 / 6
ಐದು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ ಈಗ ಜಿಂಬಾಬ್ವೆ ಪ್ರವಾಸ ಮಾಡಿದೆ. ಈ ಸರಣಿಗೆ ಬಿಸಿಸಿಐ ಯುವ ಆಟಗಾರರಿಗೆ ಅವಕಾಶ ನೀಡಿದೆ. ತಂಡದ ನಾಯಕತ್ವ ಶುಭಮನ್ ಗಿಲ್ ವಹಿಸಿಕೊಂಡಿದ್ದು, ಚೊಚ್ಚಲ ಪಂದ್ಯದಲ್ಲಿ ವಿಶ್ವದಾಖಲೆ ಸೃಷ್ಟಿಯ ಅವಕಾಶ ಟೀಂ ಇಂಡಿಯಾಕ್ಕಿದೆ.
2 / 6
ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ ಪಡೆ ಗೆಲುವು ಸಾಧಿಸಿದರೆ, ಅಂತಾರಾಷ್ಟ್ರೀಯ ಟಿ20ಯಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪೈಕಿ ಮೊದಲ ಸ್ಥಾನಕ್ಕೇರಲಿದೆ.
3 / 6
ಇದುವರೆಗೆ ಬರ್ಮುಡಾ ತಂಡ ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿದೆ. ಬರ್ಮುಡಾ ತಂಡ 2021ರಿಂದ 2023ರವರೆಗೆ ಸತತ 13 ಟಿ20 ಪಂದ್ಯಗಳನ್ನು ಗೆದ್ದಿತ್ತು. ಇದಲ್ಲದೆ, ಮಲೇಷ್ಯಾ 2022 ರಲ್ಲಿ ಸತತ 13 ಪಂದ್ಯಗಳನ್ನು ಗೆದ್ದಿದೆ. ಆದರೆ ಈ ಎರಡೂ ದೇಶಗಳು ಇದುವರೆಗೆ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ.
4 / 6
ಈ ಎರಡು ತಂಡಗಳನ್ನು ಹೊರತುಪಡಿಸಿ ಅಫ್ಘಾನಿಸ್ತಾನ ತಂಡವು 2018 ರಿಂದ 2021 ರವರೆಗೆ ಸತತ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದೆ. 2020 ರಿಂದ 2021 ರವರೆಗೆ, ರೊಮೇನಿಯಾ ಕೂಡ ಸತತ 12 ಟಿ20 ಪಂದ್ಯಗಳನ್ನು ಗೆದ್ದಿದೆ.
5 / 6
2021ರಿಂದ 2022ರವರೆಗೆ ಟೀಂ ಇಂಡಿಯಾ ಸತತ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿತ್ತು. ಈ ಬಾರಿಯೂ ಟೀಂ ಇಂಡಿಯಾ ಸತತ 12 ಪಂದ್ಯಗಳನ್ನು ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಇನ್ನೂ ಒಂದು ಪಂದ್ಯ ಗೆದ್ದರೆ ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಟೆಸ್ಟ್ ಆಡುವ ರಾಷ್ಟ್ರವಾಗಲಿದೆ.
6 / 6
ಒಂದು ವೇಳೆ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದರೆ ಟಿ20ಯಲ್ಲಿ ಸತತ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಎನಿಸಿಕೊಳ್ಳಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 6 ರಂದು ಜಿಂಬಾಬ್ವೆ ವಿರುದ್ಧ ಆಡಬೇಕಾಗಿದೆ. ಎರಡನೇ ಪಂದ್ಯ ಜೂನ್ 7 ರಂದು ನಡೆಯಲಿದೆ.