Asia Cup 2025: ಬಾಂಗ್ಲಾವನ್ನು ಮಣಿಸಿ ಶ್ರೀಲಂಕಾದ ದಾಖಲೆ ಮುರಿದ ಟೀಂ ಇಂಡಿಯಾ

Updated on: Sep 25, 2025 | 4:42 PM

Asia Cup 2025: ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಏಷ್ಯಾಕಪ್ 2025 ರ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡವೆಂಬ ಹೊಸ ದಾಖಲೆ ನಿರ್ಮಿಸಿದೆ. ಶ್ರೀಲಂಕಾ ವಿರುದ್ಧದ ಕೊನೆಯ ಸೂಪರ್ ಫೋರ್ ಪಂದ್ಯದ ನಂತರ ಫೈನಲ್‌ನಲ್ಲಿ ಪಾಕಿಸ್ತಾನ ಅಥವಾ ಬಾಂಗ್ಲಾದೇಶವನ್ನು ಎದುರಿಸಲಿದೆ.

1 / 5
2025 ರ ಏಷ್ಯಾಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಸೆಪ್ಟೆಂಬರ್ 24 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು 41 ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಅಜೇಯ ತಂಡವಾಗಿ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿದೆ.

2 / 5
ಆದಾಗ್ಯೂ ಸೆಪ್ಟೆಂಬರ್ 26 ರಂದು ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಸೂಪರ್ ಫೋರ್ ಸುತ್ತಿನಲ್ಲಿ ಕೊನೆಯ ಪಂದ್ಯವನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧದ ಈ ಗೆಲುವಿನೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಶ್ರೀಲಂಕಾ ತಂಡದ ದಾಖಲೆಯನ್ನು ಭಾರತ ಮುರಿದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

3 / 5
ಕಳೆದ ಹಲವಾರು ಏಷ್ಯಾಕಪ್ ಆವೃತ್ತಿಗಳಲ್ಲಿ ಟೀಂ ಇಂಡಿಯಾ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅದರಂತೆ ಈ ಬಾರಿಯೂ ಸಹ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ, ಭಾರತ ತಂಡವು ಈಗ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡವಾಗಿದೆ.

4 / 5
ಏಷ್ಯಾಕಪ್‌ನಲ್ಲಿ ಇದುವರೆಗೆ ಟೀಂ ಇಂಡಿಯಾ ಒಟ್ಟು 70 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 48 ಪಂದ್ಯಗಳನ್ನು ಗೆದ್ದಿದೆ. ಇದೀಗ ಎರಡನೇ ಸ್ಥಾನಕ್ಕೆ ಜಾರಿರುವ ಶ್ರೀಲಂಕಾ ಆಡಿರುವ 71 ಪಂದ್ಯಗಳಲ್ಲಿ 47 ರಲ್ಲಿ ಗೆಲುವು ಸಾಧಿಸದ್ದರೆ, ಪಾಕಿಸ್ತಾನ 36 ಗೆಲುವುಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

5 / 5
ಭಾರತ ತಂಡವು ತನ್ನ ಮೊದಲ ಸೂಪರ್ ಫೋರ್ ಪಂದ್ಯಗಳಲ್ಲಿ ಎರಡೂ ಏಕಪಕ್ಷೀಯ ಗೆಲುವುಗಳೊಂದಿಗೆ ಏಷ್ಯಾಕಪ್ 2025 ರ ಫೈನಲ್‌ಗೆ ತಲುಪಿದೆ. ಇದೀಗ ಸೆಪ್ಟೆಂಬರ್ 25 ರಂದು ದುಬೈನಲ್ಲಿ ನಡೆಯುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವಿಜೇತರು ಸೆಪ್ಟೆಂಬರ್ 28 ರಂದು ನಡೆಯುವ ಪ್ರಶಸ್ತಿ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದ್ದಾರೆ. ಏಷ್ಯಾಕಪ್ ಇತಿಹಾಸದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಫೈನಲ್ ನಡೆದಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.