ಟಾಸ್ ಸೋಲುವುದರಲ್ಲೂ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

Updated on: Jul 24, 2025 | 7:26 AM

India vs England 4th Test: ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 264 ರನ್​ ಕಲೆಹಾಕಿದೆ.

1 / 6
ಭಾರತ ತಂಡದ ಹೆಸರಿಗೆ ಹೊಸ ವಿಶ್ವ ದಾಖಲೆಯೊಂದು ಸೇರ್ಪಡೆಯಾಗಿದೆ. ಈ ವರ್ಲ್ಡ್ ರೆಕಾರ್ಡ್​ ನಿರ್ಮಾಣವಾಗಿರುವುದು ನತದೃಷ್ಟದಿಂದ ಎಂಬುದು ವಿಶೇಷ. ಅಂದರೆ ಸತತವಾಗಿ ಟಾಸ್ ಸೋತು ಟೀಮ್ ಇಂಡಿಯಾ ಅನಗತ್ಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಅದು ಕೂಡ 14 ಬಾರಿ ಟಾಸ್ ಸೋಲುವುದರೊಂದಿಗೆ..!

2 / 6
ಹೌದು, ಭಾರತ ತಂಡದ ನಾಯಕರುಗಳು ಕಳೆದ 14 ಪಂದ್ಯಗಳಲ್ಲಿ ಟಾಸ್ ಗೆದ್ದಿಲ್ಲ. ಜನವರಿಯಲ್ಲಿ ರಾಜ್​ಕೋಟ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೊನೆಯ ಬಾರಿ ಟಾಸ್ ಗೆದ್ದಿದ್ದರು. ಇದಾದ ಬಳಿಕ ಸತತ 14 ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾ ಟಾಸ್ ಸೋತಿದೆ.

3 / 6
ವಿಶೇಷ ಎಂದರೆ ಇದರ ನಡುವೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನೂ ಸಹ ಆಡಿದೆ. ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಮ್ಮೆಯೂ ಟಾಸ್ ಗೆದ್ದಿರಲಿಲ್ಲ. ಇದಾಗ್ಯೂ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಶುಭ್​ಮನ್ ಗಿಲ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ಟಾಸ್ ಸೋಲಿನ ಪರಂಪರೆಯನ್ನು ಮುಂದುವರೆಸಿದೆ.

4 / 6
ಇಂಗ್ಲೆಂಡ್ ವಿರುದ್ಧದ ಅ್ಯಂಡರ್ಸನ್-ತೆಂಡೂಲ್ಕರ್ ಟೆಸ್ಟ್ ​ಸರಣಿಯ ನಾಲ್ಕು ಪಂದ್ಯಗಳಲ್ಲೂ ಶುಭ್​ಮನ್ ಗಿಲ್ ಟಾಸ್ ಸೋತಿದ್ದಾರೆ. ಇದರೊಂದಿಗೆ ಕ್ರಿಕೆಟ್ ಇತಿಹಾಸದ ಬೇಡದ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಯಿತು. ಅಂದರೆ ಸತತವಾಗಿ ಟಾಸ್ ಸೋತು, ಟಾಸ್ ಸೋಲುವುದರಲ್ಲೇ ಟೀಮ್ ಇಂಡಿಯಾ  ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

5 / 6
ಇದಕ್ಕೂ ಮುನ್ನ ಇಂತಹದೊಂದು ಅನಗತ್ಯ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿತ್ತು. 1999 ರಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕರುಗಳು ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಹಾಗೆಯೇ 2022-2023ರ ನಡುವೆ ಇಂಗ್ಲೆಂಡ್ ತಂಡ ಸತತ 11 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಇದೀಗ ಈ ಎರಡು ದಾಖಲೆಗಳನ್ನು ಟೀಮ್ ಇಂಡಿಯಾ ಮುರಿದಿದೆ.

6 / 6
ಭಾರತ ತಂಡವು ಜನವರಿ 31 ರಿಂದ ಈವರೆಗೆ ಒಂದೇ ಒಂದು ಪಂದ್ಯದಲ್ಲಿ ಟಾಸ್ ಗೆದ್ದಿಲ್ಲ. ಈ ಮೂಲಕ ಕ್ರಿಕೆಟ್​ ಇತಿಹಾಸದಲ್ಲೇ ಸತತ 14 ಮ್ಯಾಚ್​ಗಳಲ್ಲಿ ಟಾಸ್ ಸೋತ ತಂಡವೆಂಬ ಅನಗತ್ಯ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದೀಗ ಹದಿನಾಲ್ಕು ಟಾಸ್ ಸೋಲಿನೊಂದಿಗೆ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾದ ಈ ನತದೃಷ್ಟಕ್ಕೆ ಬ್ರೇಕ್ ಹಾಕುವ ನಾಯಕ ಯಾರೆಂಬುದೇ ಸದ್ಯದ ಕುತೂಹಲ.