ಹೀಗೂ ಉಂಟೆ… ಹೀಗೊಂದು ‘ನತದೃಷ್ಟ’ದ ವಿಶ್ವ ದಾಖಲೆ

Updated on: Oct 26, 2025 | 9:54 AM

Team India: ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಸತತವಾಗಿ ಟಾಸ್ ಸೋತ ಹೀನಾಯ ದಾಖಲೆಯೊಂದು ನೆದರ್​ಲೆಂಡ್ಸ್ ತಂಡದ ಹೆಸರಿನಲ್ಲಿತ್ತು. ನೆದರ್​ಲೆಂಡ್ಸ್ ತಂಡವು ಸತತವಾಗಿ 11 ಬಾರಿ ಟಾಸ್ ಸೋತಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಟೀಮ್ ಇಂಡಿಯಾ ನತದೃಷ್ಟದೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ.

1 / 5
ಭಾರತ ತಂಡದ ಹೆಸರಿಗೆ ಹೊಸ ವಿಶ್ವ ದಾಖಲೆಯೊಂದು ಸೇರ್ಪಡೆಯಾಗಿದೆ. ಈ ವರ್ಲ್ಡ್ ರೆಕಾರ್ಡ್​ ನಿರ್ಮಾಣವಾಗಿರುವುದು ನತದೃಷ್ಟದಿಂದ ಎಂಬುದು ವಿಶೇಷ. ಅಂದರೆ ಸತತವಾಗಿ ಟಾಸ್ ಸೋತು ಟೀಮ್ ಇಂಡಿಯಾ ಅನಗತ್ಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಅದು ಕೂಡ 18 ಬಾರಿ ಟಾಸ್ ಸೋಲುವುದರೊಂದಿಗೆ..!

2 / 5
ಹೌದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಸತತವಾಗಿ ಅತ್ಯಧಿಕ ಬಾರಿ ಟಾಸ್ ಸೋತಿರುವ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. ರೋಹಿತ್ ಶರ್ಮಾ ಅವರಿಂದ ಶುರುವಾದ ಈ ದಾಖಲೆಯನ್ನು ಆಸ್ಟ್ರೇಲಿಯಾದಲ್ಲಿ ನೂತನ ನಾಯಕ ಶುಭ್​​ಮನ್ ಗಿಲ್ ಮುಂದುವರೆಸಿದ್ದಾರೆ.

3 / 5
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್​ಮನ್ ಗಿಲ್​ಗೆ ಅದೃಷ್ಟ ಕೈ ಹಿಡಿದಿಲ್ಲ. ಮೂರು ಬಾರಿ ಕೂಡ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದ ಟಾಸ್ ಸೋಲಿನ ಸಂಖ್ಯೆ 18 ಕ್ಕೇರಿದೆ.

4 / 5
ಇದಕ್ಕೂ ಮುನ್ನ ಭಾರತ ತಂಡ ಕೊನೆಯ ಬಾರಿ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದು 2023 ರಲ್ಲಿ. ​ಏಕದಿನ ವಿಶ್ವಕಪ್ 2023ರ ಸೆಮಿಫೈನಲ್​ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಒಮ್ಮೆಯೂ ಟಾಸ್ ಜಯಿಸಿಲ್ಲ ಎಂಬುದೇ ಅಚ್ಚರಿ. ಇದರ ನಡುವೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಹ ಆಡಿದೆ.

5 / 5
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಮ್ಮೆಯೂ ಟಾಸ್ ಗೆದ್ದಿರಲಿಲ್ಲ. ಇದಾಗ್ಯೂ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಭಾರತ ತಂಡವು ಶುಭ್​​ಮನ್ ಗಿಲ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಮೊದಲ ಸರಣಿಯಲ್ಲೇ ಗಿಲ್​ಗೆ ಟಾಸ್ ಅದೃಷ್ಟ ಕೈ ಕೊಟ್ಟಿದೆ. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಟಾಸ್ ಸೋಲಿನ ಸಂಖ್ಯೆ ಹದಿನೆಂಟಕ್ಕೇರಿದೆ.