- Kannada News Photo gallery Cricket photos India Predicted XI vs Pakistan Asia Cup 2022 Virat Kohli Rohit Sharma KL Rahul and others check list
IND vs PAK: ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ಪರ ಆಡುವ 11 ಆಟಗಾರರ ಸಂಭಾವ್ಯ ಪಟ್ಟಿ
India Playing XI vs PAK: ಸ್ಟಾರ್ ಆಟಗಾರರಿಂದಲೇ ತುಂಬಿರುವ ಟೀಮ್ ಇಂಡಿಯಾದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಯಾರೆಲ್ಲ ಆಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೀಗಿರುವಾಗ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ನೋಡೋಣ
Updated on:Aug 28, 2022 | 10:19 AM

ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಇಂದು ಗ್ರೂಪ್ ಎ ನಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇಡೀ ವಿಶ್ವವೇ ಈ ಕಾದಾಟ ವೀಕ್ಷಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ.

ಸ್ಟಾರ್ ಆಟಗಾರರಿಂದಲೇ ತುಂಬಿರುವ ಟೀಮ್ ಇಂಡಿಯಾದಲ್ಲಿ ಪಾಕ್ ವಿರುದ್ಧದ ಪಂದ್ಯಕ್ಕೆ ಯಾರೆಲ್ಲ ಆಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೀಗಿರುವಾಗ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ನೋಡೋಣ.

ಭಾರತ ಪರ ಓಪನರ್ಗಳಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ.

ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ನಂತರ ಸೂರ್ಯಕುಮಾರ್ ಯಾದವ್ ಬರಲಿದ್ದಾರೆ.

ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಆಡುವುದು ಬಹುತೇಕ ಖಚಿತ.

ವಿಕೆಟ್ ಕೀಪರ್ ಜವಾಬ್ದಾರಿ ರಿಷಭ್ ಪಂತ್ ವಹಿಸಲಿದ್ದಾರೆ.

ಫಿನಿಶರ್ ದಿನೇಶ್ ಕಾರ್ತಿಕ್ ಕೂಡ ಸ್ಥಾನ ಪಡೆದುಕೊಳ್ಳಬಹುದು.

ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ.

ಪ್ರಮುಖ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಲ್ ಇದ್ದಾರೆ.

ಅರ್ಶ್ದೀಪ್ ಸಿಂಗ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಆವೇಶ್ ಖಾನ್ಗೂ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಕ್ಕರೆ ಅಚ್ಚರಿ ಪಡಬೇಕಿಲ್ಲ.
Published On - 10:19 am, Sun, 28 August 22
