IND vs BAN 1st Test: ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯ ಯಾವಾಗ?, ಎಷ್ಟು ಗಂಟೆಗೆ?, ಎಲ್ಲಿ?: ಇಲ್ಲಿದೆ ಮಾಹಿತಿ
TV9 Web | Updated By: Vinay Bhat
Updated on:
Dec 13, 2022 | 8:09 AM
India vs Bangladesh 1st Test: ಇದೀಗ ವೈಟ್-ಬಾಲ್ ಸರಣಿಯ ನಂತರ ಟೆಸ್ಟ್ ಸರಣಿಗೆ ಭಾರತ ಸಜ್ಜಾಗುತ್ತಿದೆ. ಹಾಗಾದರೆ ಭಾರತ-ಬಾಂಗ್ಲಾ ಮೊದಲ ಟೆಸ್ಟ್ ಯಾವಾಗ?, ಎಲ್ಲಿ ನಡೆಯಲಿದೆ?, ಎಷ್ಟು ಗಂಟೆಗೆ ಎಂಬುದನ್ನು ನೋಡೋಣ.
1 / 7
ಭಾರತ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯಲ್ಲಿ ಅಂದುಕೊಂಡಂತೆ ಸಾಗಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡ ಟೀಮ್ ಇಂಡಿಯಾ ಕೊನೆಯ ಪಂದ್ಯದಲ್ಲಿ ಗೆದ್ದು ಬೀಗಿತಷ್ಟೆ. ಇದೀಗ ವೈಟ್-ಬಾಲ್ ಸರಣಿಯ ನಂತರ ಟೆಸ್ಟ್ ಸರಣಿಗೆ ಭಾರತ ಸಜ್ಜಾಗುತ್ತಿದೆ. ಹಾಗಾದರೆ ಭಾರತ-ಬಾಂಗ್ಲಾ ಮೊದಲ ಟೆಸ್ಟ್ ಯಾವಾಗ?, ಎಲ್ಲಿ ನಡೆಯಲಿದೆ?, ಎಷ್ಟು ಗಂಟೆಗೆ ಎಂಬುದನ್ನು ನೋಡೋಣ.
2 / 7
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14 ರಿಂದ 18 ವರೆಗೆ ನಡೆಯಲಿದೆ. ಇದು ಚಿತ್ತಗಾಂಗ್ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಚಿತ್ತಗಾಂಗ್ಗೆ ತಲುಪಿರುವ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಕೂಡ ಶುರುಮಾಡಿಕೊಂಡಿದ್ದಾರೆ.
3 / 7
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 9 ಗಂಟೆಗೆ ಶುರುವಾಗಲಿದೆ. 8:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ. ಸೋನಿ ಲಿವ್ ಓಟಿಟಿಯಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
4 / 7
ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ, ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಅಲ್ಲದೆ ಹೆಚ್ಚಿನ ಚಿಕಿತ್ಸೆಗೆಂದು ಮುಂಬೈಗೆ ವಾಪಸ್ಸಾಗಿದ್ದ ರೋಹಿತ್ ವೈದ್ಯರ ನಿರ್ದೇಶನದ ಮೇರೆಗೆ ಮೊದಲ ಟೆಸ್ಟ್ನಿಂದ ಹೊರುಗಳಿಯಲಿದ್ದಾರೆ.
5 / 7
ಹೀಗಾಗಿ ಮೊದಲ ಟೆಸ್ಟ್ಗೆ ರೋಹಿತ್ ಬದಲು ಅಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಜೊತೆಗೆ ಮೊಹಮ್ಮದ್ ಶಮಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಇವರಿಬ್ಬರ ಬದಲಿಗೆ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
6 / 7
ಭಾರತ ತಂಡ: ಕೆಎಲ್ ರಾಹುಲ್(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್.
7 / 7
ಬಾಂಗ್ಲಾದೇಶ ತಂಡ: ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹಸನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ ಚೌಧರಿ, ಮುಷ್ಫೀಕರ್ ರಹಿಮ್, ಶಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಸೈಯದ್ ಖಲೀದ್ ಅಹ್ಮದ್, ಇಬಾ ಇಸ್ಲಾಮ್ ಇಸ್ಲಾಮ್ , ಝಾಕಿರ್ ಹಸನ್, ರೆಜೌರ್ ರೆಹಮಾನ್ ರಾಜಾ, ಅನಾಮುಲ್ ಹಕ್ ಬಿಜೋಯ್.
Published On - 8:09 am, Tue, 13 December 22