AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್ ಕಿಂಗ್ ಕೊಹ್ಲಿ

Virat Kohli: ಮೂರನೇ ದಿನದಾಟದ ಕೊನೆಯಲ್ಲಿ ಎಡವಿದ ಕೊಹ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರಾದರೂ, ಬೆಂಗಳೂರಿನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 102 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 70 ರನ್​ ಬಾರಿಸಿದರು. ಈ ಇನ್ನಿಂಗ್ಸ್ ಮೂಲಕ ಕೊಹ್ಲಿ ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು.

ಪೃಥ್ವಿಶಂಕರ
|

Updated on: Oct 18, 2024 | 6:39 PM

Share
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಬೆಂಗಳೂರು ಟೆಸ್ಟ್ ಪಂದ್ಯದ ಮೂರನೇ ದಿನ ಉಭಯ ತಂಡಗಳಿಂದ ಅದ್ಭುತ ಆಟ ಕಂಡು ಬಂದಿತು. ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್ 402 ರನ್‌ಗಳಿಗೆ ಕೊನೆಗೊಂಡಿತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ ಕೂಡ ಉತ್ತಮ ಹೋರಾಟ ನೀಡುತ್ತಿದೆ. ದಿನದಾಟದಂತ್ಯಕ್ಕೆ ಭಾರತ ತಂಡ 3 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿದೆ.

1 / 7
ತಂಡದ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರೆ, ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ಖಾನ್ ಕೂಡ 50+ ರನ್‌ಗಳ ಇನ್ನಿಂಗ್ಸ್‌ ಆಡಿದರು. ಅಲ್ಲದೆ ಈ ಇಬ್ಬರ ನಡುವೆ ಶತಕದ ಜೊತೆಯಾಟವು ಕಂಡುಬಂತು. ಈ ವೇಳೆ ಕೊಹ್ಲಿ 70 ರನ್​ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರೆ, ಸರ್ಫರಾಜ್ ಖಾನ್ 70 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

2 / 7
ದಿನದಾಟದ ಕೊನೆಯಲ್ಲಿ ಎಡವಿದ ಕೊಹ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರಾದರೂ, ಬೆಂಗಳೂರಿನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 102 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 70 ರನ್​ ಬಾರಿಸಿದರು. ಈ ಇನ್ನಿಂಗ್ಸ್ ಮೂಲಕ ಕೊಹ್ಲಿ ಎರಡು ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು.

3 / 7
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಔಟಾಗಿದ್ದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ತಂಡದ ಸ್ಕೋರ್ ಅನ್ನು ಮುಂದಕ್ಕೆ ಕೊಂಡೊಯ್ದರು. ಈ ಮೂಲಕ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 221 ನೇ ಬಾರಿಗೆ 50+ ರನ್ ದಾಖಲಿಸಿದರು. ಅದೇ ಸಮಯದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಸಹ ಪೂರೈಸಿದರು.

4 / 7
ಈ ಮೂಲಕ ಭಾರತ ಪರ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 15000 ರನ್ ಪೂರೈಸಿದ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾರೆ.

5 / 7
ಕೊಹ್ಲಿ ತಮ್ಮ 316 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ವಿರಾಟ್ ನಂತರ ರಾಹುಲ್ ದ್ರಾವಿಡ್ ಹೆಸರು ಈ ಪಟ್ಟಿಯಲ್ಲಿದೆ. ದ್ರಾವಿಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 14555 ರನ್ ಕಲೆಹಾಕಿದ್ದರು. ಇದೀಗ ವಿರಾಟ್ ಕೊಹ್ಲಿ ದ್ರಾವಿಡ್​​ರನ್ನು ಹಿಂದಿಕ್ಕಿದ್ದಾರೆ.

6 / 7
ಇದಲ್ಲದೆ, ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು 50 ರನ್ ಗಡಿ ಮುಟ್ಟಿದ್ದು ಇದೇ ಮೊದಲು. ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಮತ್ತೊಂದು ವಿಶೇಷ ದಾಖಲೆ ನಿರ್ಮಿಸಿದ್ದು, ಟೆಸ್ಟ್‌ನಲ್ಲಿ 9000 ರನ್, ಏಕದಿನದಲ್ಲಿ 10000 ರನ್ ಮತ್ತು ಟಿ20 ಯಲ್ಲಿ 4000 ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

7 / 7