KL Rahul: ಭರ್ಜರಿ ಶತಕ ಸಿಡಿಸಿ 5 ದಾಖಲೆ ಬರೆದ ಕೆಎಲ್ ರಾಹುಲ್

| Updated By: ಝಾಹಿರ್ ಯೂಸುಫ್

Updated on: Dec 27, 2021 | 2:36 PM

India vs South Africa: ಈ ಶತಕದೊಂದಿಗೆ ಟೆಸ್ಟ್ ಆಡುತ್ತಿರುವ ಪ್ರಮುಖ ದೇಶಗಳ ವಿರುದ್ದ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಕೂಡ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ.

1 / 6
ದಕ್ಷಿಣ ಆಫ್ರಿಕಾ (India vs South Africa) ವಿರುದ್ದದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿಯೊಂದಿಗೆ ಕೆಎಲ್ ರಾಹುಲ್ (KL Rahul) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 6
ಮೊದಲ ದಿನದಾಟದಲ್ಲಿ ಅಜೇಯ 122 ರನ್​ ಬಾರಿಸುವ ಮೂಲಕ ಕೆಎಲ್ ರಾಹುಲ್ (KL Rahul) ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ 2ನೇ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಾಸಿಂ ಜಾಫರ್ 2007 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೇಪ್​ಟೌನ್​ನಲ್ಲಿ 116 ರನ್​ ಬಾರಿಸಿದ್ದರು.

3 / 6
 ಇನ್ನು ಈ ಶತಕದೊಂದಿಗೆ ಟೆಸ್ಟ್ ಆಡುತ್ತಿರುವ ಪ್ರಮುಖ ದೇಶಗಳ ವಿರುದ್ದ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಕೂಡ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ (KL Rahul) ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಲಾ ಒಂದು ಶತಕಗಳನ್ನು ಬಾರಿಸಿದ್ದಾರೆ.

4 / 6
ಹಾಗೆಯೇ ಇಂಗ್ಲೆಂಡ್, ವೆಸ್ಟ್​ ಇಂಡೀಸ್, ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಟೆಸ್ಟ್​ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

5 / 6
 ಏಷ್ಯಾದ ಹೊರಗಿನ ದೇಶದ ಎರಡನೇ ಅತ್ಯಂತ ಯಶಸ್ವಿ ಭಾರತೀಯ ಆರಂಭಿಕ ಆಟಗಾರ ಎಂಬ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ (KL Rahul) ಬರೆದಿದ್ದಾರೆ. ರಾಹುಲ್ ಏಷ್ಯಾದ ಖಂಡದ ಹೊರಗಿನ ದೇಶಗಳ ವಿರುದ್ದ 5 ಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಅಗ್ರಸ್ಥಾನದಲ್ಲಿದ್ದು, ಗವಾಸ್ಕರ್ ಏಷ್ಯಾ ಖಂಡದ ಹೊರಗೆ 15 ಶತಕಗಳನ್ನು ಬಾರಿಸಿದ್ದಾರೆ.

6 / 6
ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ  ಶತಕ ಗಳಿಸಿದ ಮೊದಲ ಭಾರತೀಯ ಮತ್ತು ವಿಶ್ವದ ಮೂರನೇ ಟೆಸ್ಟ್ ಆರಂಭಿಕ ಆಟಗಾರ ಎಂಬ ದಾಖಲೆಯನ್ನೂ ಕೂಡ ರಾಹುಲ್ (KL Rahul) ಬರೆದಿದ್ದಾರೆ. ಇದಕ್ಕೂ ಮುನ್ನ ವೆಸ್ಟ್​ ಇಂಡೀಸ್​ನ ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಸಯೀದ್ ಅನ್ವರ್ ಈ ಅಪರೂಪದ ಸಾಧನೆ ಮಾಡಿದ್ದರು.