Priyank Panchal: ರೋಹಿತ್ ಶರ್ಮಾ ಸ್ಥಾನಕ್ಕೆ ಆಯ್ಕೆಯಾದ ಪ್ರಿಯಾಂಕ್ ಪಾಂಚಾಲ್ ಯಾರು?
TV9 Web | Updated By: ಝಾಹಿರ್ ಯೂಸುಫ್
Updated on:
Dec 13, 2021 | 8:09 PM
India vs South Africa: ಭಾರತದ ಟೆಸ್ಟ್ ತಂಡ ಹೀಗಿದೆ : ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್
1 / 6
ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಿಂದ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಕೈ ಮಂಡಿರಜ್ಜುಗೆ ಗಾಯವಾಗಿರುವ ಕಾರಣ ಹಿಟ್ಮ್ಯಾನ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಬಿಸಿಸಿಐ ಬದಲಿ ಆಟಗಾರನಾಗಿ 31 ವರ್ಷದ ಪ್ರಿಯಾಂಕ್ ಪಾಂಚಾಲ್ ಅವರನ್ನು ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಪಾಂಚಾಲ್ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಅನುಭವಿ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಅವಕಾಶ ಪಡೆದಿರುವ ಆಟಗಾರನ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಅಷ್ಟಕ್ಕೂ ಪ್ರಿಯಾಂಕ್ ಪಾಂಚಾಲ್ ಯಾರೆಂದರೆ....
2 / 6
ಭಾರತ ಎ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್. ಗುಜರಾತ್ ತಂಡದ ಆರಂಭಿಕ ಆಟಗಾರ. ದೇಶೀಯ ಕ್ರಿಕೆಟ್ನಲ್ಲಿ ಅನುಭವಿ ಆಟಗಾರ ಎನಿಸಿಕೊಂಡಿರುವ ಪ್ರಿಯಾಂಕ್ ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಷ್ಟೇ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ದ ನಡೆದ ಸರಣಿಯಲ್ಲೂ ಪ್ರಿಯಾಂಕ್ ಕಾಣಿಸಿಕೊಂಡಿದ್ದರು.
3 / 6
ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ದದ ಪಂದ್ಯದಲ್ಲಿ 96 ರನ್‌ಗಳ ಇನ್ನಿಂಗ್ಸ್ ಆಡಿದ್ದ ಪ್ರಿಯಾಂಕ್ ಅವರನ್ನೇ ಇದೀಗ ಆಯ್ಕೆ ಮಾಡಲಾಗಿದೆ. ಏಕೆಂದರೆ ಈಗಾಗಲೇ ಸೌತ್ ಆಫ್ರಿಕಾ ಕಾಲಾವಸ್ಥೆಗೆ ಪ್ರಿಯಾಂಕ್ ಹೊಂದಿಕೊಂಡಿದ್ದು, ಹೀಗಾಗಿ ಅನುಭವಿ ಆಟಗಾರನಿಗೆ ಬಿಸಿಸಿಐ ಮಣೆ ಹಾಕಿದೆ.
4 / 6
ಅಷ್ಟೇ ಅಲ್ಲದೆ ದೇಶೀಯ ಕ್ರಿಕೆಟ್ನಲ್ಲೂ ಪ್ರಿಯಾಂಕ್ ಪಾಂಚಾಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ರಣಜಿಯಲ್ಲಿ ಗುಜರಾತ್ ಪರ ಆಡುವ ಪ್ರಿಯಾಂಕ್, 100 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.52 ಸರಾಸರಿಯಲ್ಲಿ 7011 ರನ್ ಗಳಿಸಿದ್ದಾರೆ. ಇದೇ ವೇಳೆ ಅಜೇಯ 314 ರನ್ ಬಾರಿಸಿರುವುದು ಅವರ ಗರಿಷ್ಠ ಸ್ಕೋರ್.
5 / 6
ಇನ್ನು ದೇಶೀಯ ಅಂಗಳದಲ್ಲಿ 24 ಶತಕ ಮತ್ತು 25 ಅರ್ಧ ಶತಕಗಳನ್ನು ಕೂಡ ಬಾರಿಸಿದ್ದಾರೆ. ಇದಾಗ್ಯೂ 31 ವರ್ಷದ ಪ್ರಿಯಾಂಕ್ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ದೊರೆತಿರಲಿಲ್ಲ. ಇದೀಗ ರೋಹಿತ್ ಶರ್ಮಾ ಅವರು ಗಾಯಗೊಂಡ ಕಾರಣ ಪ್ರಿಯಾಂಕ್ ಪಾಂಚಾಲ್ಗೆ ಅದೃಷ್ಟ ಖುಲಾಯಿಸಿದೆ.
6 / 6
ಭಾರತದ ಟೆಸ್ಟ್ ತಂಡ ಹೀಗಿದೆ : ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್