IND W vs IRE W: 1 ಶತಕ, 3 ಅರ್ಧಶತಕ..! ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಭಾರತ
IND W vs IRE W: ಭಾರತ ಮತ್ತು ಐರ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಭಾರತ ತಂಡ 370 ರನ್ ಗಳಿಸಿ ದಾಖಲೆ ಸೃಷ್ಟಿಸಿದೆ. ಜೆಮಿಮಾ ರೋಡ್ರಿಗಸ್ ಅವರ ಚೊಚ್ಚಲ ಏಕದಿನ ಶತಕ (102 ರನ್) ಹಾಗೂ ಸ್ಮೃತಿ ಮಂಧಾನ (73), ಪ್ರತೀಕಾ (67), ಹರ್ಲೀನ್ (89) ಅವರ ಅರ್ಧಶತಕಗಳ ನೆರವಿನಿಂದ ಭಾರತ ಏಕದಿನದಲ್ಲಿ ಬೃಹತ್ ಮೊತ್ತ ಕಲೆಹಾಕಿದೆ.
1 / 6
ಭಾರತ ಮತ್ತು ಐರ್ಲೆಂಡ್ ಮಹಿಳಾ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 370 ರನ್ ಕಲೆಹಾಕಿದೆ.
2 / 6
ತಂಡದ ಪರ ಮೂರು ಅರ್ಧಶತಕ ಹಾಗೂ 1 ಶತಕ ದಾಖಲಾಗಿದ್ದು, ಐರ್ಲೆಂಡ್ಗೆ ಬೃಹತ್ ಟಾರ್ಗೆಟ್ ನೀಡಲಾಗಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಸ್ಮೃತಿ ಮಂಧಾನ 73, ಪ್ರತೀಕಾ 67, ಹರ್ಲೀನ್ 89 ಹಾಗೂ ಜೆಮಿಮಾ 102 ರನ್ಗಳ ಶತಕದ ಇನ್ನಿಂಗ್ಸ್ ಆಡಿದರು.
3 / 6
ಜೆಮಿಮಾ ರಾಡ್ರಿಗಸ್ ಅವರ ಈ ಶತಕದ ಇನ್ನಿಂಗ್ಸ್ ಹಾಗೂ ಉಳಿದ ಮೂವರ ಅರ್ಧಶತಕದಿಂದಾಗಿ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 370 ರನ್ ಗಳಿಸಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡದ ಈವರೆಗಿನ ಅತಿ ದೊಡ್ಡ ಸ್ಕೋರ್ ಆಗಿದೆ. ಇದಲ್ಲದೆ ಜೆಮಿಮಾ ಈ ಶತಕದ ಮೂಲಕ ತಮ್ಮ 7 ವರ್ಷಗಳ ಬರವನ್ನು ನೀಗಿಸಿಕೊಂಡರು.
4 / 6
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು 102 ರನ್ಗಳ ದಾಖಲೆಯ ಇನ್ನಿಂಗ್ಸ್ ಆಡಿದ ಜೆಮಿಮಾ ರೋಡ್ರಿಗಸ್ಗೆ ಇದು ಅವರ ಚೊಚ್ಚಲ ಏಕದಿನ ಶತಕವಾಗಿದೆ. ತಮ್ಮ ಇನ್ನಿಂಗ್ಸ್ನಲ್ಲಿ 91 ಎಸೆತಗಳನ್ನು ಎದುರಿಸಿದ ಅವರು 112.08 ಸ್ಟ್ರೈಕ್ ರೇಟ್‌ನಲ್ಲಿ 102 ರನ್ ಗಳಿಸಿದರು. ಈ ವೇಳೆ ಜೆಮಿಮಾ ರಾಡ್ರಿಗಸ್ 12 ಬೌಂಡರಿಗಳನ್ನು ಬಾರಿಸಿದರು.
5 / 6
ಮೇಲೆ ಹೇಳಿದಂತೆ ಜೆಮಿಮಾ ರೋಡ್ರಿಗಸ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕ ಇದಾಗಿದೆ. ಫೆಬ್ರವರಿ 2018 ರಲ್ಲಿ ಟಿ20 ಕ್ರಿಕೆಟ್ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 12 ಮಾರ್ಚ್ 2018 ರಂದು ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅಂದರೆ ಜೆಮಿಮಾ ರೋಡ್ರಿಗಸ್ ತನ್ನ ಮೊದಲ ಶತಕವನ್ನು ಗಳಿಸಲು ಸುಮಾರು 7 ವರ್ಷ ಕಾಯಬೇಕಾಯಿತು.
6 / 6
ಜೆಮಿಮಾ ರೋಡ್ರಿಗಸ್ ಇದುವರೆಗೆ ಟೀಂ ಇಂಡಿಯಾ ಪರ 41 ಪಂದ್ಯಗಳನ್ನು ಆಡಿದ್ದು, ಈ ಮಾದರಿಯಲ್ಲಿ 1000 ರನ್ ಪೂರೈಸಿದ್ದಾರೆ. ಹಾಗೆಯೇ 3 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 3 ಅರ್ಧ ಶತಕಗಳ ಸಹಾಯದಿಂದ 235 ರನ್ ಗಳಿಸಿದ್ದಾರೆ. ಇದಲ್ಲದೇ ಟಿ20ಯಲ್ಲಿ ಟೀಂ ಇಂಡಿಯಾ ಪರ 107 ಪಂದ್ಯಗಳಲ್ಲಿ 2267 ರನ್ ಗಳಿಸಿದ್ದಾರೆ. ಇದರಲ್ಲಿ 12 ಅರ್ಧಶತಕಗಳೂ ಸೇರಿವೆ.