ಗೆಲುವು ಸೋಲುಗಳೊಂದಿಗೆ ಹೀಗಿದೆ ಭಾರತ ತಂಡದ ಸೆಮಿಫೈನಲ್ ಲೆಕ್ಕಾಚಾರ

Updated on: Oct 23, 2025 | 7:54 AM

Womens ODI World Cup 2025: ಮಹಿಳಾ ಏಕದಿನ ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದರೆ, ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಭಾರತ, ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ನಡುವೆ ಸೆಮಿಫೈನಲ್ ರೇಸ್ ಮುಂದುವರೆದಿದೆ.

1 / 6
ಮಹಿಳಾ ಏಕದಿನ ವಿಶ್ವಕಪ್​​ನ 24ನೇ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಎರಡೂ ತಂಡಗಳು ಸೆಮಿಫೈನಲ್ ರೇಸ್​​ನಲ್ಲಿದೆ.

2 / 6
ಈ ಪಂದ್ಯದಲ್ಲಿ ಗೆದ್ದರೆ 6 ಅಂಕಗಳೊಂದಿಗೆ ಟೀಮ್ ಇಂಡಿಯಾ ತನ್ನ ಸೆಮಿಫೈನಲ್ ಹಾದಿಯನ್ನು ಸಗುಮಗೊಳಿಸಬಹುದು. ಅತ್ತ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದರೆ, 6 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಇದಾಗ್ಯೂ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಸೆಮಿಫೈನಲ್ ರೇಸ್​​ನಿಂದ ಹೊರಬೀಳುವುದಿಲ್ಲ.

3 / 6
ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧ ಕೂಡ ಒಂದು ಮ್ಯಾಚ್ ಆಡಬೇಕಿದೆ. ಈ ಪಂದ್ಯದ ಫಲಿತಾಂಶದೊಂದಿಗೆ ಭಾರತ ತಂಡಕ್ಕೆ ಸೆಮಿಫೈನಲ್​​​ಗೇರಬಹುದು. ಹಾಗಿದ್ರೆ ಟೀಮ್ ಇಂಡಿಯಾ ಸೆಮಿಫೈನಲ್​​ಗೇರಲು ಮುಂದಿರುವ ಹಾದಿಗಳಾವುವು ಎಂದು ನೋಡೋಣ...

4 / 6
ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳಲ್ಲಿ ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್ ವಿರುದ್ಧ ಗೆದ್ದರೆ ಒಟ್ಟು 8 ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್ ಗೆ ಪ್ರವೇಶಿಸಲಿದೆ. ಅತ್ತ ನ್ಯೂಝಿಲೆಂಡ್ ಕೊನೆಯ ಮ್ಯಾಚ್​​ನಲ್ಲಿ ಗೆದ್ದರೂ 5ನೇ ಸ್ಥಾನದಲ್ಲೇ ಉಳಿಯಲಿದೆ. ಹೀಗಾಗಿ ಭಾರತ ತಂಡ ನೇರವಾಗಿ ಸೆಮಿಫೈನಲ್​​ಗೆ ಪ್ರವೇಶಿಸಬೇಕಿದ್ದರೆ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧ ಗೆಲ್ಲಲೇಬೇಕು.

5 / 6
ಒಂದು ವೇಳೆ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಸೋತರೆ, ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಗೆ ಎಂಟ್ರಿ ಕೊಡಬಹುದು. ಹೀಗಾಗಬೇಕಾದಲ್ಲಿ ನ್ಯೂಝಿಲೆಂಡ್ ತನ್ನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬೇಕು. ಅಂದರೆ ನ್ಯೂಝಿಲೆಂಡ್ ತಂಡ ಭಾರತದ ವಿರುದ್ಧ ಗೆದ್ದು, ಇಂಗ್ಲೆಂಡ್ ವಿರುದ್ಧ ಸೋತರೆ, ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಮೂಲಕ ಕಿವೀಸ್ ಪಡೆಯನ್ನು ಹಿಂದಿಕ್ಕಿ ಸೆಮಿಫೈನಲ್​​​ಗೇರಬಹುದು.

6 / 6
ಒಂದು ವೇಳೆ ನ್ಯೂಝಿಲೆಂಡ್ ವಿರುದ್ಧ ಗೆದ್ದು ಬಾಂಗ್ಲಾದೇಶ್ ವಿರುದ್ಧ ಸೋತರೂ, ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ಗೆಲ್ಲುವುದನ್ನು ಎದುರು ನೋಡಬೇಕು. ಈ ಮೂಲಕ ನೆಟ್ ರನ್ ರೇಟ್ ನಲ್ಲಿ ನ್ಯೂಝಿಲೆಂಡ್ ಅನ್ನು ಹಿಂದಿಕ್ಕಿ ಭಾರತ ತಂಡವು ಸೆಮಿಫೈನಲ್ ಗೇರಬಹುದು. ಹೀಗಾಗಿ ಭಾರತ ತಂಡದ ಪಾಲಿಗೆ ಮುಂದಿನ ಎರಡು ಪಂದ್ಯಗಳು ನಿರ್ಣಾಯಕ. ಈ ಎರಡು ಮ್ಯಾಚ್​​ಗಳಲ್ಲಿ ಗೆಲುವು ದಾಖಲಿಸಿದರೆ ನೇರವಾಗಿ ಸೆಮಿಫೈನಲ್​​ಗೆ ಎಂಟ್ರಿ ಕೊಡಲಿದೆ.