Team India: ಯಾರಾಗಲಿದ್ದಾರೆ ಭಾರತ ತಂಡದ ಮುಂದಿನ ನಾಯಕ?

Updated on: May 08, 2025 | 9:04 AM

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿದೆ.

1 / 6
ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರೆಂಬ ಚರ್ಚೆಗಳು ಕೂಡ ಶುರುವಾಗಿದೆ. ಏಕೆಂದರೆ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕಾಗಿ ನಾಲ್ವರು ಆಟಗಾರರ ನಡುವೆ ನೇರ ಪೈಪೋಟಿ ಇದೆ. ಇವರಲ್ಲಿ ಒಬ್ಬರಿಗೆ ಕ್ಯಾಪ್ಟನ್ ಪಟ್ಟ ಸಿಗುವುದು ಬಹುತೇಕ ಖಚಿತ. ಆ ಆಟಗಾರರು ಯಾರೆಂದರೆ...

2 / 6
ಶುಭ್​ಮನ್ ಗಿಲ್: ಭಾರತ ಟಿ20 ಹಾಗೂ ಏಕದಿನ ತಂಡಗಳ ಉಪನಾಯಕರಾಗಿರುವ ಶುಭ್​ಮನ್ ಗಿಲ್ ಟೆಸ್ಟ್ ತಂಡದ ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಗಿಲ್​ಗೆ ಕ್ಯಾಪ್ಟನ್ ಪಟ್ಟ ನೀಡುವ ಬಗ್ಗೆ ಕೂಡ ಬಿಸಿಸಿಐ ಆಯ್ಕೆ ಸಮಿತಿ ಚರ್ಚಿಸಿದೆ.

3 / 6
ಜಸ್​ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಈಗಾಗಲೇ ಭಾರತ ತಂಡವನ್ನು ಟೆಸ್ಟ್​ನಲ್ಲಿ ಮುನ್ನಡೆಸಿದ್ದಾರೆ. ಅಲ್ಲದೆ ಅವರು ಪ್ರಸ್ತುತ ಟೆಸ್ಟ್ ತಂಡದ ಉಪನಾಯಕ. ಹೀಗಾಗಿ ಅವರಿಗೆ ಪೂರ್ಣ ಪ್ರಮಾಣದ ನಾಯಕತ್ವ ಲಭಿಸಿದರೂ ಅಚ್ಚರಿಪಡಬೇಕಿಲ್ಲ.

4 / 6
ಕೆಎಲ್ ರಾಹುಲ್: ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ದೀರ್ಘಾವಧಿ ಕ್ರಿಕೆಟ್​ನಲ್ಲಿ ರಾಹುಲ್ ಖಾಯಂ ಸ್ಥಾನ ಹೊಂದಿದ್ದಾರೆ. ಹೀಗಾಗಿ ಅನುಭವಕ್ಕೆ ಮಣೆ ಹಾಕಲು ಮುಂದಾದರೆ ಕನ್ನಡಿಗನಿಗೆ ನಾಯಕತ್ವ ಲಭಿಸುವ ಸಾಧ್ಯತೆಯಿದೆ.

5 / 6
ರಿಷಭ್ ಪಂತ್: ಭಾರತ ವೈಟ್ ಬಾಲ್​ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿರುವ ರಿಷಭ್ ಪಂತ್ ಕೂಡ ನಾಯಕತ್ವದ ರೇಸ್​ನಲ್ಲಿದ್ದಾರೆ. ಅದರಲ್ಲೂ ವಿಕೆಟ್ ಕೀಪರ್​ಗೆ ಕ್ಯಾಪ್ಟನ್ಸಿ ವಹಿಸಲು ಮುಂದಾದರೆ ಪಂತ್​ಗೆ ನಾಯಕತ್ವ ಒಲಿಯಲಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್​ನಲ್ಲಿನ ನಾಯಕತ್ವವನ್ನು ರಿಷಭ್ ಪಂತ್ ಎದುರು ನೋಡುತ್ತಿದ್ದಾರೆ.

6 / 6
ಇಲ್ಲಿ ಶುಭ್​ಮನ್ ಗಿಲ್ ಹಾಗೂ ಜಸ್​ಪ್ರೀತ್ ಬುಮ್ರಾ ಹೆಸರುಗಳು ಮುಂಚೂಣಿಯಲ್ಲಿದ್ದರೂ, ಬಿಸಿಸಿಐ ನಡೆ ಮಾತ್ರ ನಿಗೂಢವಾಗಿ ಉಳಿದಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಬಳಿಕ ಮತ್ತೊಮ್ಮೆ ವಿಕೆಟ್ ಕೀಪರ್​ಗೆ ಕ್ಯಾಪ್ಟನ್ ಪಟ್ಟ ನೀಡಬೇಕೆಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿಯೇ ಈ ಬಾರಿ ಟೆಸ್ಟ್ ತಂಡದ ಸಾರಥ್ಯ ಯಾರಿಗೆ ಸಿಗಲಿದೆ ಎಂಬುದೇ ಕುತೂಹಲ.