
ಐಪಿಎಲ್ನ ದ್ವಿತಿಯಾರ್ಧ ರಂಗೇರಲು ಇನ್ನು ದಿನ ಮಾತ್ರ ಉಳಿದಿವೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ಆಡುವುದು ಅನುಮಾನ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಗಾಯಗೊಂಡಿದ್ದರು. ಸಿಪಿಎಲ್ನಲ್ಲಿ ಸೆಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಡುಪ್ಲೆಸಿಸ್ ಕ್ವಾರ್ಟರ್ ಫೈನಲ್ ವೇಳೆ ಇಂಜುರಿಗೆ ಒಳಗಾಗಿದ್ದರು. ಹೀಗಾಗಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.

ಇದೀಗ ಡುಪ್ಲೆಸಿಸ್ ಯುಎಇಗೆ ಬಂದಿಳಿದರೂ ಗಾಯದ ಗಂಭೀರ ಪರಿಣಾಮ ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯುವ ಅಗತ್ಯವಿದೆ. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು. ಇತ್ತ ಡುಪ್ಲೆಸಿಸ್ ಹೊರಗುಳಿದರೆ ಸಿಎಸ್ಕೆ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ.

ಈ ಬಗ್ಗೆ ಮಾತನಾಡಿರುವ CSK CEO ಕಾಶಿ ವಿಶ್ವನಾಥನ್, ಡುಪ್ಲೆಸಿಸ್ ತಂಡವನ್ನು ಸೇರಿಕೊಂಡಿದ್ದಾರೆ. ಇದಾಗ್ಯೂ ಅವರ ಆಯ್ಕೆ ಬಗ್ಗೆ ಪಂದ್ಯದ ಆರಂಭಕ್ಕೂ ಮೊದಲು ನಿರ್ಧರಿಸಲಾಗುತ್ತದೆ. ಭಾನುವಾರ ಅವರ ಫಿಟ್ನೆಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ಲೇಯಿಂಗ್ ಇಲೆವೆನ್ನಲ್ಲಿ ಆಯ್ಕೆ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದಿದ್ದಾರೆ.

ಡುಪ್ಲೆಸಿಸ್ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದ ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕು. ಒಂದು ವೇಳೆ ಈ ಸಮಸ್ಯೆಯು ಬಿಗಡಾಯಿಸಿದರೆ 3-6 ವಾರಗಳ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ ಮೊದಲೆರಡು ಪಂದ್ಯಗಳಿಂದ ಫಾಫ್ ಡುಪ್ಲೆಸಿಸ್ ಹೊರಗುಳಿಯುವ ಸಾಧ್ಯತೆ ಹೆಚ್ಚು.

ಚೆನ್ನೈ ಸೂಪರ್ ಕಿಂಗ್ಸ್ ತಂಡ
Published On - 4:55 pm, Sat, 18 September 21