Ishan Kishan: 5 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿ: ಸ್ಟೋಟಕ ದಾಂಡಿಗನ ನೆನಪಿಸಿದ ಇಶಾನ್ ಕಿಶನ್

Edited By:

Updated on: Dec 10, 2022 | 7:09 PM

Ishan Kishan: ಬಾಂಗ್ಲಾದೇಶ್ ವಿರುದ್ಧ 131 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 24 ಫೋರ್​ನೊಂದಿಗೆ 210 ರನ್​ ಚಚ್ಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್ ಆಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

1 / 10
ಇಶಾನ್ ಕಿಶನ್...ಈ ಹೆಸರು ಮೊದಲ ಬಾರಿಗೆ ಕ್ರಿಕೆಟ್ ಲೋಕದಲ್ಲಿ ಕೇಳಿ ಬಂದಿದ್ದು 2016 ರಲ್ಲಿ. ಅದು ಕೂಡ 17 ವರ್ಷದ ಟೀಮ್ ಇಂಡಿಯಾದ ನಾಯಕ ಎಂಬ ಹೆಡ್​ಲೈನ್​ನೊಂದಿಗೆ. ಆ ಬಳಿಕ ಪಾಕೆಟ್ ಡೈನಾಮೊ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು.

ಇಶಾನ್ ಕಿಶನ್...ಈ ಹೆಸರು ಮೊದಲ ಬಾರಿಗೆ ಕ್ರಿಕೆಟ್ ಲೋಕದಲ್ಲಿ ಕೇಳಿ ಬಂದಿದ್ದು 2016 ರಲ್ಲಿ. ಅದು ಕೂಡ 17 ವರ್ಷದ ಟೀಮ್ ಇಂಡಿಯಾದ ನಾಯಕ ಎಂಬ ಹೆಡ್​ಲೈನ್​ನೊಂದಿಗೆ. ಆ ಬಳಿಕ ಪಾಕೆಟ್ ಡೈನಾಮೊ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು.

2 / 10

ಹೌದು, 2016 ರಲ್ಲಿ ಅಂಡರ್ 19 ಟೀಮ್ ಇಂಡಿಯಾದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೆ 2016 ರಲ್ಲಿ ಯುವ ದಾಂಡಿಗನನ್ನು ಗುಜರಾತ್ ಲಯನ್ಸ್ ಫ್ರಾಂಚೈಸಿಯು ಖರೀದಿಸಿತು. ಆದರೆ ಯುವ ಆಟಗಾರ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಲು ವರ್ಷಗಳೇ ಕಾಯಬೇಕಾಯಿತು.

3 / 10

ಇದಕ್ಕೆ ಮುಖ್ಯ ಕಾರಣ ಅಂದು ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಮಹೇಂದ್ರ ಸಿಂಗ್​ ಧೋನಿ ಇದ್ದರು. ಆದರೆ ಧೋನಿಯ ನಿವೃತ್ತಿಯ ಬಳಿಕ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದ ಆಟಗಾರರಲ್ಲಿ ಕಿಶನ್ ಕೂಡ ಒಬ್ಬರು. ಇದರ ನಡುವೆ ಕಅವರ ನಾಯಕತ್ವದಡಿಯಲ್ಲಿ ಕಿರಿಯರ ವಿಶ್ವಕಪ್ ಆಡಿದ ರಿಷಭ್ ಪಂತ್​ಗೆ ಅವಕಾಶ ಲಭಿಸಿದರೂ, ಇಶಾನ್ ಕಿಶನ್ ಅವರ ಅದೃಷ್ಟದ ಬಾಗಿಲು ತೆರೆದಿರಲಿಲ್ಲ.

4 / 10

ಈ ಪೈಪೋಟಿಯಲ್ಲಿ ಕೊನೆಗೆ ಫಲ ಸಿಕ್ಕಿದ್ದು 2021 ರಲ್ಲಿ. ಕಳೆದ ವರ್ಷ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವ ಮುನ್ನ ಇಶಾನ್ ಕಿಶನ್ ಐಪಿಎಲ್​ನಲ್ಲಿ 50 ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

5 / 10

ಆದರೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದರೂ, ಬೆಂಚ್ ಕಾದಿದ್ದೇ ಹೆಚ್ಚು. ಇದಕ್ಕೆ ಸಾಕ್ಷಿಯೇ ಕಿಶನ್ ಇದುವರೆಗೆ ಆಡಿರುವುದು ಕೇವಲ 10 ಏಕದಿನ ಪಂದ್ಯಗಳು ಮಾತ್ರ. ಈ ಬಾರಿ ಕೂಡ ಬೆಂಚ್ ಕಾಯುತ್ತಿದ್ದ ಕಿಶನ್​ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಗಾಯವು ವರದಾನವಾಯಿತು.

6 / 10

ಬಾಂಗ್ಲಾದೇಶ್ ವಿರುದ್ಧದದ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಹಿಟ್​ಮ್ಯಾನ್ ಬದಲಿಗೆ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಸ್ಪೋಟಕ ದಾಂಡಿಗ ಸಿಕ್ಸ್​-ಫೋರ್​ಗಳ ಸುರಿಮಳೆಗೈದು ಅಬ್ಬರಿಸಿದರು.

7 / 10

ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಸ್ಪೋಟಕ ಡಬಲ್ ಸೆಂಚುರಿ ಇತಿಹಾಸ ಬರೆದರು. ಈ ಮೂಲಕ ಟೀಮ್ ಇಂಡಿಯಾದ ಆರಂಭಿಕ ಆಟಗಾರರ ಪೈಪೋಟಿಯಲ್ಲಿ ತಾನು ಕೂಡ ಇದ್ದೇನೆಂದು ಬ್ಯಾಟ್ ಮೂಲಕ ಸಾರಿ ಹೇಳಿದ್ದಾರೆ. ಅಷ್ಟೇ ಯಾಕೆ ಟೀಮ್ ಇಂಡಿಯಾದ ಆರಂಭಿಕ ಹಾಗೂ ವಿಕೆಟ್ ಕೀಪರ್​ ಸಮಸ್ಯೆಗೆ ತಾನೇ ಅತ್ಯುತ್ತಮ ಆಯ್ಕೆ ಎಂದು ಸಾರಲು ಹೊರಟಿದ್ದಾರೆ ಇಶಾನ್ ಕಿಶನ್.

8 / 10

ಅಂದಹಾಗೆ ಇಶಾನ್ ಕಿಶನ್ ಮೂಲತಃ ಬಿಹಾರದವರು. ಬಿಹಾರ್ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐನ ವಿವಾದಿಂದಾಗಿ ಅವರು ರಣಜಿ ತಂಡವನ್ನು ಬದಲಿಸಿದ್ದರು. ಅಂದು ಜಾರ್ಖಂಡ್​ (ರಾಂಚಿ) ತಂಡದ ಟ್ರಯಲ್ಸ್​ನಲ್ಲಿ ಕಾಣಿಸಿಕೊಂಡಿದ್ದ ಕಿಶನ್ ಅವರನ್ನು ಮೊದಲ ಸುತ್ತಿನಲ್ಲೇ ಆಯ್ಕೆ ಮಾಡಲಾಯಿತು. ಅಂದರಂತೆ ಇದೀಗ ಮಹೇಂದ್ರ ಸಿಂಗ್ ಧೋನಿಯ ಬಳಿಕ ಜಾರ್ಖಂಡ್​ನಿಂದ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಇಶಾನ್ ಕಿಶನ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

9 / 10

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಇಶಾನ್ ಕಿಶನ್ ಅವರ ರೋಲ್ ಮಾಡೆಲ್ ಮಹೇಂದ್ರ ಸಿಂಗ್ ಧೋನಿ. ಹಾಗೆಯೇ ಕಿಶನ್ ಅವರ ಫೇವರೇಟ್ ಬ್ಯಾಟ್ಸ್​ಮನ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್​ಕ್ರಿಸ್ಟ್. ಹೀಗಾಗಿ ಕಿಶನ್ ಅವರ ಸಿಡಿಲಬ್ಬರ ಕೆಲವೊಮ್ಮೆ ಗಿಲ್​ಕ್ರಿಸ್ಟ್​ ಅವರ ತೂಫಾನ್ ಬ್ಯಾಟಿಂಗ್ ಅನ್ನು ನೆನಪಿಸುತ್ತದೆ.

10 / 10

ಇದೀಗ ಗಿಲ್​ಕ್ರಿಸ್ಟ್ ಅವರ ಸಿಡಿಲಬ್ಬರವನ್ನು ನೆನಪಿಸುವಂತೆ ಬಾಂಗ್ಲಾದೇಶ್ ವಿರುದ್ಧ 131 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 24 ಫೋರ್​ನೊಂದಿಗೆ 210 ರನ್​ ಚಚ್ಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್ ಆಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

Loading...
Unable to load recommendations.
Follow Us