IPL 2021: ಐಪಿಎಲ್ ತಯಾರಿ ಆರಂಭ: ಚೆನ್ನೈ ತಲುಪಿದ ಸಿಎಸ್ಕೆ ನಾಯಕ ಎಂ ಎಸ್ ಧೋನಿ
TV9 Web | Updated By: Digi Tech Desk
Updated on:
Aug 10, 2021 | 8:50 AM
MS Dhoni: ಈಗಾಗಲೇ ಎಲ್ಲ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ದುಬೈ ಫ್ಲೈಟ್ ಏರಲು ಕಾತುರವಾಗಿ ನಿಂತಿದೆ. ಇದರ ಮೊದಲ ಅಂಗವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಮುಂಜಾನೆ ಚೆನ್ನೈಗೆ ಬಂದಿಳಿದಿದ್ದಾರೆ.
1 / 7
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (ಐಪಿಎಲ್) ಎರಡನೇ ಚರಣ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯದಲ್ಲಿ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ.
2 / 7
ಈಗಾಗಲೇ ದ್ವಿತಿಯಾರ್ಧಕ್ಕಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ , ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಯುಎಇಗೆ ತೆರಳಿದೆ. ಇತ್ತ ಹಲವು ಆಟಗಾರರು ಎರಡನೇ ಹಂತದ ಪಂದ್ಯಗಳಿಗೆ ಅಲಭ್ಯರಾಗಿದ್ದು, ಅವರ ಬದಲಿ ಆಟಗಾರರನ್ನು ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡಿದೆ.
3 / 7
IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
4 / 7
ಇದೇ ಆಗಸ್ಟ್ 13 ರಂದು ಧೋನಿ, ರಾಬಿನ್ ಉತ್ತಪ್ಪ ಸೇರಿದಂತೆ ಕೆಲ ರಾಷ್ಟ್ರೀಯ ತಂಡದಲ್ಲಿರದ ದೇಶೀಯ ಕ್ರಿಕೆಟಿಗರು ಅರಬ್ ರಾಷ್ಟ್ರಕ್ಕೆ ಮೊದಲು ಪ್ರಯಾಣ ಬೆಳೆಸಲಿದ್ದಾರೆ. ನಂತರ ಅಲ್ಲಿ ಅಭ್ಯಾಸ ಶುರುಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
5 / 7
ಶ್ರೇಯಸ್ ಅಯ್ಯರ್
6 / 7
ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಕಾವೇರುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸವನ್ನೂ ಆರಂಭಿಸಿದೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ.
7 / 7
ಒಟ್ಟು ಮೂರು ತಾಣಗಳಲ್ಲಿ ಪಂದ್ಯಗಳು ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಈ ಪೈಕಿ 13 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾದರೆ ಶಾರ್ಜಾ ಕ್ರೀಡಾಂಗಣದಲ್ಲಿ 10 ಪಂದ್ಯಗಳು ನಡೆಯುತ್ತವೆ. 8 ಪಂದ್ಯಗಳಿಗೆ ಅಬುದಾಬಿ ಆತಿಥ್ಯ ವಹಿಸಲಿದೆ.
Published On - 8:43 am, Tue, 10 August 21