ಈ ಹಿಂದೆ 2018ರ ಮೆಗಾ ಹರಾಜಿನಲ್ಲಿ 3+2 ಸೂತ್ರ ಪರಿಚಯಿಸಲಾಗಿತ್ತು. ಅದರಂತೆ ಮೂವರನ್ನು ಉಳಿಸಿಕೊಂಡು ಇಬ್ಬರ ಮೇಲೆ ಆರ್ಟಿಎಂ ಕಾರ್ಡ್ ಬಳಸಿಕೊಳ್ಳಬಹುದಿತ್ತು. ಅಂದರೆ ಆರ್ಟಿಎಂ ಮೂಲಕ ಉಳಿಸಿಕೊಂಡ ಆಟಗಾರರನ್ನು ಹರಾಜಿಗಿಟ್ಟು, ಅವರನ್ನು ಬೇರೊಂದು ತಂಡ ಹೆಚ್ಚಿನ ಮೊತ್ತಕ್ಕೆ ಖರೀದಿಸಿದರೆ ಆ ಮೊತ್ತವನ್ನು ನೀಡಿ ತಮ್ಮಲ್ಲೇ ಉಳಿಸಿಕೊಳ್ಳಬಹುದಾಗಿತ್ತು.