14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (ಐಪಿಎಲ್) ಎರಡನೇ ಚರಣ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯದಲ್ಲಿ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ.
ಈಗಾಗಲೇ ದ್ವಿತಿಯಾರ್ಧಕ್ಕಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ , ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಯುಎಇಗೆ ತೆರಳಿದೆ. ಇತ್ತ ಹಲವು ಆಟಗಾರರು ಎರಡನೇ ಹಂತದ ಪಂದ್ಯಗಳಿಗೆ ಅಲಭ್ಯರಾಗಿದ್ದು, ಅವರ ಬದಲಿ ಆಟಗಾರರನ್ನು ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡಿದೆ.
IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದೇ ಆಗಸ್ಟ್ 13 ರಂದು ಧೋನಿ, ರಾಬಿನ್ ಉತ್ತಪ್ಪ ಸೇರಿದಂತೆ ಕೆಲ ರಾಷ್ಟ್ರೀಯ ತಂಡದಲ್ಲಿರದ ದೇಶೀಯ ಕ್ರಿಕೆಟಿಗರು ಅರಬ್ ರಾಷ್ಟ್ರಕ್ಕೆ ಮೊದಲು ಪ್ರಯಾಣ ಬೆಳೆಸಲಿದ್ದಾರೆ. ನಂತರ ಅಲ್ಲಿ ಅಭ್ಯಾಸ ಶುರುಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಕಾವೇರುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸವನ್ನೂ ಆರಂಭಿಸಿದೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ.
ಒಟ್ಟು ಮೂರು ತಾಣಗಳಲ್ಲಿ ಪಂದ್ಯಗಳು ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಈ ಪೈಕಿ 13 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾದರೆ ಶಾರ್ಜಾ ಕ್ರೀಡಾಂಗಣದಲ್ಲಿ 10 ಪಂದ್ಯಗಳು ನಡೆಯುತ್ತವೆ. 8 ಪಂದ್ಯಗಳಿಗೆ ಅಬುದಾಬಿ ಆತಿಥ್ಯ ವಹಿಸಲಿದೆ.
Published On - 8:43 am, Tue, 10 August 21