- Kannada News Photo gallery Cricket photos IPL 2021 RCB Kane Richardson KKR Pat Cummins and Two more Australian players not available for the 14th IPL in UAE
IPL 2021: ಆರ್ಸಿಬಿಗೆ ಬಿಗ್ ಶಾಕ್: ತಂಡದ ಸ್ಟಾರ್ ಆಟಗಾರ ಐಪಿಎಲ್ 2021 ರಿಂದಲೇ ಹೊರಕ್ಕೆ
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹರಾಜಿನಲ್ಲಿ 4 ಕೋಟಿ ಕೊಟ್ಟು ಖರೀದಿ ಮಾಡಿದ್ದ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಕೇನ್ ರಿಚರ್ಡ್ಸನ್ ಐಪಿಎಲ್ 2021ಕ್ಕೆ ಲಭ್ಯರಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
Updated on: Aug 20, 2021 | 10:15 AM

ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಮತ್ತೆ ಶುರುವಾಗಲಿದೆ ಎಂಬ ಖುಷಿ ಒಂದುಕಡೆಯಾದರೆ ಸ್ಟಾರ್ ಆಟಗಾರರು ಲಭ್ಯರಿಲ್ಲ ಎಂಬ ಆಘಾತ ಫ್ರಾಂಚೈಸಿಗೆ ಎದುರಾಗಿದೆ. ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್ 2021 ಫೇಸ್ 2ಗೆ ಲಭ್ಯರಿಲ್ಲದ ಆಟಗಾರರ ಹೆಸರನ್ನು ತಿಳಿಸಿದೆ.

* ಕೇನ್ ರಿಚರ್ಡ್ಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಕೇನ್ ಜೊತೆ ಐಪಿಎಲ್ 2021 ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಯಾಟ್ ಕಮಿನ್ಸ್, ಪಂಜಾಬ್ ಕಿಂಗ್ಸ್ ತಂಡದ ಜ್ಯೆ ರಿಚರ್ಡಸನ್ ಮತ್ತು ರಿಲೆ ಮೆರಡಿತ್ ಕೂಡ ಮಿಲಿಯನ್ ಡಾಲರ್ ಟೂರ್ನಿಗೆ ಲಭ್ಯರಿಲ್ಲ.

ಐಪಿಎಲ್ ಸೀಸನ್ 15 ರಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ. ಪ್ರಸ್ತುತ ಇರುವ 8 ಫ್ರಾಂಚೈಸಿಗಳ ಜೊತೆ ಹೊಸದಾಗಿ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಸೇರ್ಪಡೆಯಾಗಿದೆ. ಈ ಎರಡು ತಂಡಗಳ ಹರಾಜಿನಿಂದ ಬಿಸಿಸಿಐ ನಿರೀಕ್ಷೆಗೂ ಮೀರಿದ ಆದಾಯಗಳಿಸಿದೆ.

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಪುನರಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಗೆ ತೆರಳಿದ್ದು ಕ್ವಾರಂಟೈನ್ನಲ್ಲಿದೆ. ಸದ್ಯ ಇತರೆ ತಂಡಗಳು ಯುಎಇಗೆ ತೆರಳಲು ಸಜ್ಜಾಗಿ ನಿಂತಿದೆ.

IPL 2021 Virat Kohli Team RCB assemble in Bengaluru team to fly out UAE on August 29th

ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಕಾವೇರುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸವನ್ನೂ ಆರಂಭಿಸಿದೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ.




