IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

| Updated By: ಝಾಹಿರ್ ಯೂಸುಫ್

Updated on: Sep 27, 2021 | 2:33 PM

IPL 2021- RCB vs MI: ಕಳೆದ 13 ಸೀಸನ್​ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಸೀಸನ್​ವೊಂದರಲ್ಲಿ ಎರಡು ಬಾರಿ ಸೋಲಿಸಲು ಆರ್​ಸಿಬಿಗೆ ಸಾಧ್ಯವಾಗಿರಲಿಲ್ಲ.

1 / 5
ಮುಂಬೈ ಇಂಡಿಯನ್ಸ್​ ವಿರುದ್ದ ಆರ್​ಸಿಬಿ ಗೆಲುವು ಸಾಧಿಸಿದೆ. ಆದರೆ ಇದು ಅಂತಿಂಥ ಗೆಲುವಲ್ಲ ಎಂಬುದು ವಿಶೇಷ. ಏಕೆಂದರೆ ಐಪಿಎಲ್​ನಲ್ಲಿ ಬಲಿಷ್ಠ ತಂಡವೆಂದೇ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್​​ ಈ ಬಾರಿ ಆರ್​ಸಿಬಿ ವಿರುದ್ದ ಹೀನಾಯ ಸೋಲನುಭವಿಸಿದೆ. ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಆರ್​ಸಿಬಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರದ ಅರ್ಧಶತಕದ ನೆರವಿನಿಂದ 165 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

2 / 5
ಪ್ಲೇಆಫ್​ಗೆ ಎಂಟ್ರಿಕೊಟ್ಟ ಆರ್‌ಸಿಬಿ

ಪ್ಲೇಆಫ್​ಗೆ ಎಂಟ್ರಿಕೊಟ್ಟ ಆರ್‌ಸಿಬಿ

3 / 5
 ಕಳೆದ 13 ಸೀಸನ್​ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಸೀಸನ್​ವೊಂದರಲ್ಲಿ ಎರಡು ಬಾರಿ ಸೋಲಿಸಲು ಆರ್​ಸಿಬಿಗೆ ಸಾಧ್ಯವಾಗಿರಲಿಲ್ಲ. ಇದೀಗ ಈ ಬಾರಿಯ ಐಪಿಎಲ್​ನಲ್ಲಿ ಎರಡು ಸಲ ಸೋಲಿನ ರುಚಿ ತೋರಿಸುವ ಮೂಲಕ ಆರ್​ಸಿಬಿ ಹೊಸ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಮೊದಲಾರ್ಧದಲ್ಲಿ ಆರ್​​ಸಿಬಿ ಮುಂಬೈ ವಿರುದ್ದ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು. ಇದೀಗ 54 ರನ್​ಗಳ ಜಯದೊಂದಿಗೆ ಮುಂಬೈ ತಂಡವನ್ನು ಸೀಸನ್​ವೊಂದರಲ್ಲಿ 2 ಬಾರಿ ಸೋಲಿಸಿದೆ. ಅಷ್ಟೇ ಅಲ್ಲದೆ ಈ ಸಲ ಆಲೌಟ್​ ಮಾಡುವ ಮೂಲಕ ಆರ್​ಸಿಬಿ ಮುಂಬೈ ತಂಡದ ದೀರ್ಘಕಾಲದ ದಾಖಲೆಯನ್ನು ಅಳಿಸಿಹಾಕಿದೆ.

4 / 5
ಹೌದು, ಕಳೆದ 14 ವರ್ಷದಿಂದ​ ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್​ 28 ಬಾರಿ ಮುಖಾಮುಖಿಯಾಗಿತ್ತು. ಆದರೆ ಒಮ್ಮೆಯೂ ಕೂಡ ಆರ್​ಸಿಬಿ ಬೌಲರುಗಳಿಗೆ ಮುಂಬೈ ಇಂಡಿಯನ್ಸ್​ ತಂಡವನ್ನು ಆಲೌಟ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ದುಬೈನಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಹಾಗೂ ಯುಜುವೇಂದ್ರ ಚಹಲ್ ಸ್ಪಿನ್ ಮ್ಯಾಜಿಕ್​ನೊಂದಿಗೆ ಆರ್​ಸಿಬಿ ಮುಂಬೈ ಇಂಡಿಯನ್ಸ್​ ತಂಡವನ್ನು ಆಲೌಟ್ ಮಾಡಿದೆ.

5 / 5
RCB

RCB