IPL 2022: ಮೂವರು ನಾಯಕರಲ್ಲ, ನಾಲ್ವರು ಹೊಸ ನಾಯಕರು

| Updated By: ಝಾಹಿರ್ ಯೂಸುಫ್

Updated on: Mar 26, 2022 | 6:50 PM

IPL 2022: ಈ ಬಾರಿ ಐಪಿಎಲ್​ನಲ್ಲಿ ನಾಯಕತ್ವ ಇಲ್ಲದೆ ಆಡಲಿರುವ ಹಾಗೂ ನಾಯಕರಾಗಿ ಪದಾರ್ಪಣೆ ಮಾಡಲಿರುವ ಆಟಗಾರರು ಯಾರೆಲ್ಲಾ ನೋಡೋಣ...

1 / 9
 ಐಪಿಎಲ್ ಸೀಸನ್ 15 ಗೆ ಚಾಲನೆ ದೊರೆತಿದೆ. ಈ ಬಾರಿ 10 ತಂಡಗಳು 65 ದಿನಗಳ ಕಾಲ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ. ವಿಶೇಷ ಎಂದರೆ ತಂಡಗಳ ಏರಿಕೆಯೊಂದಿಗೆ ಈ ಬಾರಿ ಕೆಲ ತಂಡಗಳ ನಾಯಕರುಗಳು ಕೂಡ ಬದಲಾಗಿದ್ದಾರೆ. ಅದರಲ್ಲೂ ನಾಲ್ವರು ಹೊಸ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ನಾಯಕತ್ವ ಇಲ್ಲದೆ ಆಡಲಿರುವ ಹಾಗೂ ನಾಯಕರಾಗಿ ಪದಾರ್ಪಣೆ ಮಾಡಲಿರುವ ಆಟಗಾರರು ಯಾರೆಲ್ಲಾ ನೋಡೋಣ...

2 / 9
ವಿರಾಟ್ ಕೊಹ್ಲಿ: ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಕೇವಲ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಕೊಹ್ಲಿ ಕಳೆದ ಸೀಸನ್​ ಐಪಿಎಲ್​ ಬೆನ್ನಲ್ಲೇ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

3 / 9
ಮಹೇಂದ್ರ ಸಿಂಗ್ ಧೋನಿ: ಸಿಎಸ್​ಕೆ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೇ ಮೊದಲ ಬಾರಿಗೆ ನಾಯಕನಲ್ಲದೆ ಚೆನ್ನೈ ಪರ ಆಡಲಿದ್ದಾರೆ.

4 / 9
ಡೇವಿಡ್ ವಾರ್ನರ್: ಈ ಹಿಂದೆ ಎಸ್​ಆರ್​ಹೆಚ್ ತಂಡದ ನಾಯಕರಾಗಿ ಮಿಂಚಿದ್ದ ಡೇವಿಡ್ ವಾರ್ನರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

5 / 9
 ರವೀಂದ್ರ ಜಡೇಜಾ: ಸಿಎಸ್​ಕೆ ತಂಡದ ಹೊಸ ನಾಯಕನಾಗಿ ರವೀಂದ್ರ ಜಡೇಜಾ ಪದಾರ್ಪಣೆ ಮಾಡಲಿದ್ದಾರೆ. ವಿಶೇಷ ಎಂದರೆ ಜಡೇಜಾ ಇದೇ ಮೊದಲ ಬಾರಿ ಐಪಿಎಲ್​ನಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

6 / 9
ಹಾರ್ದಿಕ್ ಪಾಂಡ್ಯ: ಐಪಿಎಲ್​ನ ಹೊಸ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುವ ಮೂಲಕ ಹಾರ್ದಿಕ್ ಪಾಂಡ್ಯ ಕೂಡ ಇದೇ ಮೊದಲ ಬಾರಿಗೆ ನಾಯಕನಾಗಿ ಮಿಂಚಲಿದ್ದಾರೆ.

7 / 9
ಮಯಾಂಕ್ ಅಗರ್ವಾಲ್: ಪಂಜಾಬ್ ಕಿಂಗ್ಸ್ ತಂಡದ ಹಂಗಾಮಿ ನಾಯಕನಾಗಿ ಮಯಾಂಕ್ ಅಗರ್ವಾಲ್ ಒಂದು ಪಂದ್ಯವನ್ನು ಮುನ್ನಡೆಸಿದ್ದರು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಕ್ಯಾಪ್ಟನ್ ಆಗಿ ಕನ್ನಡಿಗ ಪದಾರ್ಪಣೆ ಮಾಡಲಿದ್ದಾರೆ.

8 / 9
ಫಾಫ್ ಡುಪ್ಲೆಸಿಸ್: ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಐಪಿಎಲ್​ನಲ್ಲಿ ಹಲವು ವರ್ಷಗಳಿಂದ ಆಡುತ್ತಿದ್ದರೂ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಆರ್​ಸಿಬಿಗೆ ಕಪ್ ಗೆದ್ದು ಕೊಡುವ ವಿಶ್ವಾಸದಲ್ಲಿದ್ದಾರೆ ಫಾಫ್ ಡುಪ್ಲೆಸಿಸ್.

9 / 9
IPL All Team Captains

IPL All Team Captains

Published On - 6:49 pm, Sat, 26 March 22