Most Catches in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಟಾಪ್ 5 ಆಟಗಾರರಿವರು..!

ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಾರೆ ತಮ್ಮ ಅತ್ಯುತ್ತಮ ಫೀಲ್ಡಿಂಗ್‌ನಿಂದ 204 ಇನ್ನಿಂಗ್ಸ್‌ಗಳಲ್ಲಿ 109 ಕ್ಯಾಚ್‌ಗಳನ್ನು ಹಿಡಿದ್ದಾರೆ. 100ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಏಕೈಕ ಫೀಲ್ಡರ್ ರೈನಾ ಮಾತ್ರ.

ಪೃಥ್ವಿಶಂಕರ
|

Updated on:Mar 26, 2022 | 3:19 PM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಸೀಸನ್ ಇಂದಿನಿಂದ ಪ್ರಾರಂಭವಾಗಲಿದ್ದು, ಪ್ರತಿ ಸೀಸನ್‌ನಂತೆ ಈ ಬಾರಿಯೂ ಬೌಂಡರಿ ಮತ್ತು ಸಿಕ್ಸರ್‌ಗಳ ಭಾರೀ ಮಳೆಯಾಗಲಿದೆ. ಇದರೊಂದಿಗೆ, ಅನೇಕ ಅತ್ಯುತ್ತಮ ಮತ್ತು ಸಂವೇದನಾಶೀಲ ಓವರ್‌ಗಳು ಸಹ ಕಂಡುಬರುತ್ತವೆ, ಅಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಇವುಗಳ ಹೊರತಾಗಿ, ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವಿದೆ. ಅದ್ಯಾವುದೆಂದರೆ ಕ್ಯಾಚ್‌. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದವರ ಬಗ್ಗೆ ಮಾತನಾಡುವುದಾದರೆ, ಒಬ್ಬ ಆಟಗಾರ ಮಾತ್ರ 100 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ, ಆದರೆ ಕೆಲವರು ನರ್ವಸ್ 90 ಆಸುಪಾಸಿನಲ್ಲಿದ್ದಾರೆ.

1 / 5
ಸುರೇಶ್ ರೈನಾ ಈ ಬಾರಿ ಐಪಿಎಲ್‌ನ ಭಾಗವಾಗಿರುವುದಿಲ್ಲ, ಆದರೆ ಅವರ ಒಂದು ದಾಖಲೆಯು ಇನ್ನೂ ಹಾಗೆ ಉಳಿದಿದೆ. ಆ ದಾಖಲೆ ಯಾವುದೆಂದರೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದವರದ್ದಾಗಿದೆ. ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಾರೆ ತಮ್ಮ ಅತ್ಯುತ್ತಮ ಫೀಲ್ಡಿಂಗ್‌ನಿಂದ 204 ಇನ್ನಿಂಗ್ಸ್‌ಗಳಲ್ಲಿ 109 ಕ್ಯಾಚ್‌ಗಳನ್ನು ಹಿಡಿದ್ದಾರೆ. 100ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಏಕೈಕ ಫೀಲ್ಡರ್ ರೈನಾ ಮಾತ್ರ.

2 / 5
Most Catches in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಟಾಪ್ 5 ಆಟಗಾರರಿವರು..!

ರೈನಾ ನಂತರ ಮುಂಬೈ ಇಂಡಿಯನ್ಸ್‌ನ ದಿಗ್ಗಜ ಕೆರಿಬಿಯನ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ 178 ಇನ್ನಿಂಗ್ಸ್‌ಗಳಲ್ಲಿ 96 ಕ್ಯಾಚ್‌ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಋತುವಿನಲ್ಲಿ ಅವರು ಶತಕ ಪೂರೈಸಬಹುದು.

3 / 5
Most Catches in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಟಾಪ್ 5 ಆಟಗಾರರಿವರು..!

ಎಬಿ ಡಿವಿಲಿಯರ್ಸ್ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಸೂಪರ್‌ಮ್ಯಾನ್ ಈಗ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು, ಆದರೆ ಅವರ ಅದ್ಭುತ ಕ್ಯಾಚ್ ಅನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಈ ಮಾಜಿ RCB ಅನುಭವಿ 130 ಇನ್ನಿಂಗ್ಸ್‌ಗಳಲ್ಲಿ 90 ಬಾರಿ ಫೀಲ್ಡರ್ ಆಗಿ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಮರಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಈ ವಿಷಯದಲ್ಲಿ ಡಿವಿಲಿಯರ್ಸ್‌ಗೆ ಸಮನಾಗಿದ್ದು, 213 ಇನ್ನಿಂಗ್ಸ್‌ಗಳಲ್ಲಿ 90 ಕ್ಯಾಚ್‌ಗಳನ್ನು ಪಡೆದಿದ್ದಾರೆ.

4 / 5
Most Catches in IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಟಾಪ್ 5 ಆಟಗಾರರಿವರು..!

ಇದೆಲ್ಲದರ ಜೊತೆಗೆ ಆರ್‌ಸಿಬಿ ಮಾಜಿ ನಾಯಕ ಮತ್ತು ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಕೂಡ ಶತಕದ ಓಟದಲ್ಲಿ ಮುಂದೆ ಸಾಗುತ್ತಿದ್ದಾರೆ. ಆದರೆ, ಸದ್ಯ 100 ಕ್ಯಾಚ್‌ಗಳಿಂದ ಸ್ವಲ್ಪ ದೂರ ಉಳಿದಿದ್ದಾರೆ. ಕೊಹ್ಲಿ 205 ಇನ್ನಿಂಗ್ಸ್‌ಗಳಲ್ಲಿ 84 ಕ್ಯಾಚ್‌ಗಳನ್ನು ಪಡೆದಿದ್ದಾರೆ.

5 / 5

Published On - 3:04 pm, Sat, 26 March 22

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ