IPL 2022: ಬದಲಿ ಆಟಗಾರನಾಗಿ ಲಕ್ನೋ ತಂಡಕ್ಕೆ ಯಾರು ಎಂಟ್ರಿ ಕೊಡಲಿದ್ದಾರೆ?
TV9 Web | Updated By: ಝಾಹಿರ್ ಯೂಸುಫ್
Updated on:
Mar 19, 2022 | 4:46 PM
IPL 2022: ಈ ಬಾರಿ ಮೆಗಾ ಹರಾಜು ಪಟ್ಟಿಯಲ್ಲಿರುವ ಅನ್ಸೋಲ್ಡ್ ಆಟಗಾರರಿಂದ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಿದ್ದು, ಹೀಗಾಗಿ ಮಾರ್ಕ್ ವುಡ್ ಸ್ಟಾನದಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ..?
1 / 8
ಐಪಿಎಲ್ ಸೀಸನ್ 15 ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಸ್ಟಾರ್ ಆಲ್ರೌಂಡರ್ ಮಾರ್ಕ್ ವುಡ್ ಹೊರನಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿದ್ದ ಮಾರ್ಕ್ ವುಡ್ ಇದೀಗ ಐಪಿಎಲ್ ಟೂರ್ನಿಯಿಂದಲೇ ಹಿಂದೆ ಸರಿದಿದ್ದಾರೆ. ಹೀಗಾಗಿ ಲಕ್ನೋ ತಂಡವು ಬದಲಿ ಆಟಗಾರನ ಆಯ್ಕೆ ಮುಂದಾಗಲಿದೆ.
2 / 8
ಈ ಬಾರಿ ಮೆಗಾ ಹರಾಜು ಪಟ್ಟಿಯಲ್ಲಿರುವ ಅನ್ಸೋಲ್ಡ್ ಆಟಗಾರರಿಂದ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಿದ್ದು, ಹೀಗಾಗಿ ಮಾರ್ಕ್ ವುಡ್ ಸ್ಟಾನದಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಈ ಪಟ್ಟಿಯಲ್ಲಿ 5 ಐವರು ವಿದೇಶಿ ಆಟಗಾರರು ಮಾರ್ಕ್ ವುಡ್ ಅವರ ಸ್ಥಾನ ತುಂಬಬಲ್ಲರು, ಅವರೆಂದರೆ...
3 / 8
1- ಆಂಡ್ರ್ಯೂ ಟೈ: ಈ ಬಾರಿಯ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಂಡ್ರ್ಯೂ ಟೈ ಅವರನ್ನು ಯಾವುದೇ ತಂಡದ ಖರೀದಿಸಿರಲಿಲ್ಲ. 1 ಕೋಟಿ ಮೂಲ ಬೆಲೆ ಹೊಂದಿದ್ದ ಟೈ ಇದುವರೆಗೆ ಐಪಿಎಲ್ನಲ್ಲಿ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 40 ವಿಕೆಟ್ ಪಡೆದು ಮಿಂಚಿದ್ದಾರೆ. ಹೀಗಾಗಿ ವೇಗದ ಬೌಲರ್ ಆಲ್ರೌಂಡರ್ ಸ್ಥಾನದಲ್ಲಿ ಮಾರ್ಕ್ವುಡ್ ಸ್ಟಾನದಲ್ಲಿ ಟೈ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
4 / 8
2- ಕೇನ್ ರಿಚರ್ಡ್ಸನ್: ಐಪಿಎಲ್ 2022 ರ ಹರಾಜಿನಲ್ಲಿ ಕೇನ್ ರಿಚರ್ಡ್ಸನ್ ಮಾರಾಟವಾಗದಿರುವುದು ಅಚ್ಚರಿಗೆ ಕಾರಣವಾಗಿತ್ತು. ಇದುವರೆಗೆ 15 ಐಪಿಎಲ್ ಪಂದ್ಯವಾಡಿರುವ ರಿಚರ್ಡ್ಸನ್ 19 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಮಾರ್ಕ್ ವುಡ್ ಸ್ಥಾನಕ್ಕೆ ಆಸೀಸ್ ವೇಗಿ ಕೇನ್ ರಿಚರ್ಡ್ಸನ್ ಕೂಡ ಉತ್ತಮ ಆಯ್ಕೆ.
5 / 8
3- ಶೆಲ್ಡನ್ ಕಾಟ್ರೆಲ್: ಶೆಲ್ಡನ್ ಕಾಟ್ರೆಲ್ ಕೇವಲ ಒಂದೆರಡು ವರ್ಷಗಳ ಹಿಂದೆ ಹೆಚ್ಚು ಬೇಡಿಕೆಯಿರುವ T20 ಬೌಲರ್‌ಗಳಲ್ಲಿ ಒಬ್ಬರಾಗಿದ್ದರು, ಅಲ್ಲದೆ ಪಂಜಾಬ್ ಕಿಂಗ್ಸ್ ಅವರನ್ನು 8.50 ಕೋಟಿಗೆ ಆಯ್ಕೆ ಕೂಡ ಮಾಡಿತ್ತು. ಆದರೆ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಆ ಬಳಿಕ ಪಂಜಾಬ್ ಬಿಡುಗಡೆ ಮಾಡಿತು. ಇದಾಗ್ಯೂ ಐಪಿಎಲ್ನಲ್ಲಿ 6 ವಿಕೆಟ್ ಪಡೆದಿರುವ ಶೆಲ್ಡನ್ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿರಲಿಲ್ಲ.
6 / 8
4- ನವೀನ್-ಉಲ್-ಹಕ್: ಅಫ್ಘಾನಿಸ್ತಾನದ ಯುವ ವೇಗಿ ನವೀನ್-ಉಲ್-ಹಕ್ ಅವರು ಕೂಡ ಉತ್ತಮ ಆಯ್ಕೆ. ಏಕೆಂದರೆ ಯುವ ಆಟಗಾರ ಕ್ಯಾಂಡಿ ಟಸ್ಕರ್ಸ್, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಖುಲ್ನಾ ಟೈಗರ್ಸ್‌ನಂತಹ ಫ್ರಾಂಚೈಸಿಗಳಿಗಾಗಿ ಆಡಿರುವ ಅನುಭವ ಹೊಂದಿದ್ದಾರೆ. ಅಲ್ಲದೆ 13 ಟಿ20 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ.
7 / 8
5- ಓಶೇನ್ ಥಾಮಸ್: 2019 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ವೆಸ್ಟ್ ಇಂಡೀಸ್ನ ಓಶೇನ್ ಥಾಮಸ್ ಆ ಬಳಿಕ ಐಪಿಎಲ್ನಲ್ಲಿ ಅವಕಾಶ ಪಡೆದಿರಲಿಲ್ಲ. ಇದಾಗ್ಯೂ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಬದಲಿ ವೇಗದ ಬೌಲರ್ಗಳ ಆಯ್ಕೆಯಲ್ಲಿ ಓಶೇನ್ ಹೆಸರು ಕೂಡ ಕಾಣಿಸಿಕೊಂಡಿದೆ.
8 / 8
ಒಟ್ಟಿನಲ್ಲಿ ಐಪಿಎಲ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿದ್ದು, ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬದಲಿ ಆಟಗಾರರನ್ನು ಯಾರನ್ನು ಆಯ್ಕೆ ಮಾಡಲಿದೆ ಕಾದು ನೋಡಬೇಕಿದೆ.