IPL 2022: ಗುಜರಾತ್ ಟೈಟನ್ಸ್ ತಂಡಕ್ಕೆ ಹೊಸ ಆಟಗಾರ ಎಂಟ್ರಿ..!

| Updated By: ಝಾಹಿರ್ ಯೂಸುಫ್

Updated on: Mar 08, 2022 | 5:30 PM

IPL 2022: ಗುರ್ಬಾಜ್ ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬ್ಯಾಟ್ಸ್‌ಮನ್. ಅಫ್ಘಾನಿಸ್ತಾನದ ಪರ 9 ODI ಆಡಿರುವ ಯುವ ಬ್ಯಾಟ್ಸ್​ಮನ್ ಒಟ್ಟು 428 ರನ್ ಗಳಿಸಿದ್ದಾರೆ.

1 / 5
ಐಪಿಎಲ್ 2022 ರ ಆರಂಭಕ್ಕೂ ಮುನ್ನವೇ ಗುಜರಾತ್ ಟೈಟನ್ಸ್ ತಂಡದಿಂದ ಆರಂಭಿಕ ಆಟಗಾರ ಜೇಸನ್ ರಾಯ್ ಹಿಂದೆ ಸರಿದಿದ್ದರು. ಬಯೋಬಬಲ್ ಕಾರಣ ನೀಡಿ ಇಂಗ್ಲೆಂಡ್ ಆಟಗಾರ ಐಪಿಎಲ್ ಆಡುವುದಿಲ್ಲ ಎಂದಿದ್ದರು. ಇದೀಗ ಜೇಸನ್ ರಾಯ್ ಬದಲಿಗೆ ಗುಜರಾತ್ ಟೈಟನ್ಸ್ ಹೊಸ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

2 / 5
ಗುಜರಾತ್ ಟೈಟನ್ಸ್ ತಂಡವು ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಹಮಾನುಲ್ಲಾ ಗುರ್ಬಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸ್ಪೋಟಕ ಆರಂಭಿಕ ಆಟಗಾರನಾಗಿರುವ ಗುರ್ಬಾಜ್ ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ಅವಕಾಶ ಪಡೆದಿದ್ದಾರೆ.

3 / 5
ರಹಮಾನುಲ್ಲಾ ಗುರ್ಬಾಜ್ ಕಳೆದ ವರ್ಷ ಟಿ10 ಲೀಗ್‌ನಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಡೆಲ್ಲಿ ಬುಲ್ಸ್ ಪರ ಆಡಿದ್ದ ಗುರ್ಬಾಜ್ ಕೇವಲ 16 ಎಸೆತಗಳಲ್ಲಿ 57 ರನ್ ಗಳಿಸಿದ್ದರು.

4 / 5
ಇನ್ನು  69 T20 ಪಂದ್ಯಗಳನ್ನು ಆಡಿರುವ ಗುರ್ಬಾಜ್ 1620 ರನ್ ಗಳಿಸಿದ್ದಾರೆ. ಹಾಗೆಯೇ ಲಂಕಾ ಪ್ರೀಮಿಯರ್ ಲೀಗ್, ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇದೀಗ ಬದಲಿ ಆಟಗಾರನಾಗಿ ಐಪಿಎಲ್​ನಲ್ಲೂ ಅವಕಾಶ ಪಡೆದಿದ್ದಾರೆ.

5 / 5
ಗುರ್ಬಾಜ್ ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬ್ಯಾಟ್ಸ್‌ಮನ್. ಅಫ್ಘಾನಿಸ್ತಾನದ ಪರ 9 ODI ಆಡಿರುವ ಯುವ ಬ್ಯಾಟ್ಸ್​ಮನ್ ಒಟ್ಟು 428 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ಗುರ್ಬಾಜ್ ಆಡಿರುವ 9 ಏಕದಿನ ಪಂದ್ಯಗಳಲ್ಲಿ 3 ಶತಕಗಳನ್ನು ಗಳಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಪರಿಣಾಮ ಇದೀಗ ಗುಜರಾತ್ ಟೈಟನ್ಸ್ ತಂಡದಲ್ಲಿ ಅವಕಾಶ ದೊರೆತಿದೆ.