ಕ್ರಿಸ್ ಮಾರಿಸ್: ಕ್ರಿಸ್ ಮಾರಿಸ್ ಪ್ರಸಕ್ತ ಐಪಿಎಲ್ ನಲ್ಲಿ ಆಡುತ್ತಿಲ್ಲ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೋರಿಸ್ ಒಟ್ಟು 9 ಬಾರಿ ಡಕ್ ಔಟ್ ಆಗಿದ್ದಾರೆ
ಎಬಿ ಡಿವಿಲಿಯರ್ಸ್: ಈ ಸ್ಟಾರ್ ಕ್ರಿಕೆಟಿಗ ಕೂಡ ಪ್ರಸಕ್ತ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು ಶೂನ್ಯಕ್ಕೆ 10 ಬಾರಿ ಪೆವಿಲಿಯನ್ ಸೇರಿದರು.
ಸುನಿಲ್ ನರೈನ್: ಈ ಕೆರಿಬಿಯನ್ ಸ್ಟಾರ್ ಕ್ರಿಕೆಟಿಗ ಪ್ರಸ್ತುತ ಕೆಕೆಆರ್ ಪರ ಆಡುತ್ತಿದ್ದಾರೆ. ಅಲ್ಲದೆ ಒಟ್ಟು 10 ಬಾರಿ ಡಕೌಟ್ ಆಗಿದ್ದಾರೆ.
ರಶೀದ್ ಖಾನ್: ರಶೀದ್ ಖಾನ್ ಪ್ರಸಕ್ತ ಐಪಿಎಲ್‌ನಲ್ಲಿ ಹೊಸ ತಂಡ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಅಗ್ರ ಸ್ಪಿನ್ನರ್ ಒಟ್ಟು ಶೂನ್ಯ ರನ್‌ಗಳಿಗೆ 11 ಬಾರಿ ಪೆವಿಲಿಯನ್ ಸೇರಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್: ಈ ಆಸೀಸ್ ಆಲ್‌ರೌಂಡರ್ ಪ್ರಸ್ತುತ RCB ಪರ ಆಡುತ್ತಿದ್ದಾರೆ. ಒಟ್ಟು 12 ಬಾರಿ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದಾರೆ..
Published On - 3:35 pm, Thu, 28 April 22